GT vs SRH Match | ಸನ್ ರೈಸರ್ಸ್ ತಂಡದ Playing XI
ಇಂಡಿಯನ್ ಪ್ರಿಮಿಯರ್ ಲೀಗ್ ನ 40ನೇ ಪಂದ್ಯದಲ್ಲಿ ಬಲಿಷ್ಠ ತಂಡಗಳ ಕಾದಾಟ ನಡೆಸಲಿವೆ. ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿರುವ ಗುಜರಾತ್ ಟೈಟಾನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಂಬೈನ ವಾಂಖೆಡೆ ಮೈದಾನಲ್ಲಿ ಸೆಣಸಾಡಲಿವೆ. ಈ ಸೀಸನ್ ನಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ.
ಸದ್ಯ ಅಂಕಪಟ್ಟಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೂರನೇ ಸ್ಥಾನದಲ್ಲಿದೆ. ವಿಲಿಯಮ್ ಸನ್ ಪಡೆ ಕೂಡ ಏಳು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 9 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 47 ರನ್ ಗಳಿಸಿದರು.
ಕಳೆದ ಬಾರಿ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದಾಗ ಸನ್ ರೈಸರ್ಸ್ ತಂಡ 8 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ ಸೇಡು ತೀರಿಸಿಕೊಳ್ಳುತ್ತಾ ಕಾದು ನೋಡಬೇಕಿದೆ.
ತಂಡಗಳ ಬಲಾಬಲದ ವಿಚಾರಕ್ಕೆ ಬಂದರೇ ಉಭಯ ತಂಡಗಳು ಬಲಿಷ್ಠವಾಗಿವೆ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಎರಡೂ ತಂಡಗಳು ಸ್ಥಿರ ಪ್ರದರ್ಶನ ನೀಡುತ್ತಿವೆ.

ಸನ್ ರೈಸರ್ಸ ಹೈದರಾಬಾದ್ ತಂಡ ಬ್ಯಾಲೆನ್ಸ್ ಆಗಿದೆ. ಬ್ಯಾಟಿಂಗ್ ನಲ್ಲಿ ಕೇನ್ ವಿಲಿಯಮ್ ಸನ್, ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಟಿ ಪ್ರಮುಖ ಆಟಗಾರರಾಗುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಆಡೆಮ್ ಮಾರ್ಕ್ರಂ, ನಿಕೋಲಸ್ ಪೂರನ್ ತಂಡಕ್ಕೆ ನೆರವಾಗುತ್ತಿದ್ದರೇ ವಾಷಿಂಗ್ ಟನ್ ಸುಂದರ್ ಆಲ್ ರೌಂಡರ್ ಆಟ ಚೆನ್ನಾಗಿದೆ.
ಇನ್ನು ಸನ್ ರೈಸರ್ಸ್ ಗೆಲುವು ನಿಂತಿರೋದೇ ಬೌಲಿಂಗ್ ವಿಭಾಗದಲ್ಲಿ, ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ವಿಕೆಟ್ ಉಡಾಯಿಸಿದ್ರೆ, ಟಿ ನಟರಾಜನ್ ಪವರ್ ಪ್ಲೇ ಜೊತೆಗೆ ಡೆತ್ ಓವರ್ ಗಳಲ್ಲಿ ವಿಕೆಟ್ ಗಳ ಬೇಟೆಯಾಡುತ್ತಿದ್ದಾರೆ. ಇವರಿಗೆ ಉಮ್ರಾನ್ ಮಲ್ಲಿಕ್ ಸಾಥ್ ನೀಡುತ್ತಾ ಮಿಡಲ್ ಓವರ್ ಗಳಲ್ಲಿ ತಮ್ಮ ವೇಗದ ಮೂಲಕ ವಿಕೆಟ್ ಪಡೆಯುತ್ತಿದ್ದಾರೆ.
ಪ್ಲೇಯಿಂಗ್ 11 : ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ ©, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ಜಗದೀಶ ಸುಚಿತ್/ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್
GT vs SRH Match Sun Raisers Team Playing XI