ಜೆಡಿಎಸ್ ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಗುಡ್ ಬೈ..?
ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಜೆಡಿಎಸ್ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.
ಹೌದು..! ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಇಂದು ಕಾಂಗ್ರೆಸ್ ನಾಯಕ ಕೆ.ಎಸ್. ರಾಜಣ್ಣ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೇಳೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀನಿವಾಸ್, ನಾನು ಅಧಿಕಾರದ ಹಿಂದೆ ಹೋಗಿದ್ರೆ ತುಮಕೂರು ಜಿಲ್ಲೆಯ ಉಸ್ತುವಾರಿ ಆಗಿರುತ್ತಿದ್ದೆ. ನಾನು ವಾಮಮಾರ್ಗದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ.
ಜೆಡಿಎಸ್ ನಲ್ಲಿ ಕೆಲವರು ಬಿಜೆಪಿ ಜೊತೆ ಹೋಗುವ ಬಗ್ಗೆ ಮಾತನಾಡಿದ್ರೆ, ಇನ್ನೂ ಕೆಲವರು ಬೇಡ ಅಂತಿದ್ದಾರೆ. ಒಂದು ವೇಳೆ ನಾನು ಪಕ್ಷ ತೊರೆದ್ರೆ ಕುಮಾರಸ್ವಾಮಿ ಅವರು ತಲೆ ಕೆಡಿಸಿಕೊಳ್ಳಲ್ಲ.
ಸಿದ್ದು `ಕೈ’ ಹಿಡಿದ ಉತ್ತರ ಕರ್ನಾಟಕ ಜನತೆ: ಇಲ್ಲದಿದ್ರೆ `ಗೋವಿಂದ’ ಅಂತ ಜೋಶಿ ಲೇವಡಿ
ಒಂದು ವೇಳೆ ಜೆಡಿಎಸ್ ಮುಖಂಡರು ಬಿಜೆಪಿ ಜೊತೆಗೆ ಹೋದ್ರೆ ನೂರಕ್ಕೆ ನೂರರಷ್ಟು ಜನತಾದಳದಲ್ಲಿರಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸೇರುತ್ತಿರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಣ್ಣ ಅವರು ಹಿರಿಯ ಮುಖಂಡರು. ಅವರ ಜೊತೆ ತುಂಬಾ ದಿನಗಳಿಂದ ಒಡನಾಟಿವಿದೆ.
ಕಾಂಗ್ರೆಸ್ ನಾಯಕರು ಯಾರು ನನ್ನನ್ನು ಸಂಪರ್ಕಿಸಿಲ್ಲ. ಸದ್ಯಕ್ಕೆ ನಾನು ಜೆಡಿಎಸ್ ಶಾಸಕನಾಗಿದ್ದು, ಪಕ್ಷ ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel