Guinness World Record : 73 ಗಂಟೆಗಳಲ್ಲಿ 7 ಖಂಡಗಳನ್ನ ಸುತ್ತಿ ದಾಖಲೆ ಬರೆದ ಭಾರತೀಯ ಜೋಡಿ..
ಕೇವಲ ಮೂರು ದಿನಗಳಲ್ಲಿ ಅಂದರೆ 73 ಗಂಟೆಗಳಲ್ಲಿ ಏಳು ಖಂಡಗಳನ್ನು ಸುತ್ತುವ ಮೂಲಕ ಭಾರತದ ಸುಜೋಯ್ ಕುಮಾರ್ ಮಿಶ್ರಾ ಮತ್ತು ಡಾ. ಅಲಿ ಇರಾನಿ ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.
ಮೂರು ದಿನಗಳಲ್ಲಿ ಏಳು ಖಂಡಗಳ ನಡುವೆ ಪ್ರಯಾಣ ಎಂದರೇ ಅಚ್ಚರಿಯಾಗುವುದ ಖಚಿತ. ಈ ಜೋಡಿ ಅಂಟಾರ್ಟಿಕಾದಿಂದ ಶುರು ಮಾಡಿ ಕೇವಲ ಮೂರು ದಿನ ಒಂದು ಗಂಟೆಯಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಯಾಣ ಮುಗಿಸಿದ್ದಾರೆ. ಇವರ ಈ ಸಾಹಸ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ದಾಖಲೆ ಸೇರಿದೆ.
ಒಟ್ಟು 3 ದಿನ, 1 ಗಂಟೆ, 5 ನಿಮಿಷ, 4 ಸೆಕೆಂಡ್‌ಗಳಲ್ಲಿ ಏಳು ಖಂಡಗಳನ್ನ ಸುತ್ತಿದ ಅವರ ಸಾಧನೆಯನ್ನು ದೃಢಪಡಿಸುವ ಗಿನ್ನಿಸ್ ದಾಖಲೆಯನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಸುಜೋಯ್ ಮತ್ತು ಅಲಿ ಡಿಸೆಂಬರ್ 4 (2022) ರಂದು ಅಂಟಾರ್ಕ್ಟಿಕಾದಲ್ಲಿ ವಿಮಾನದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಡಿಸೆಂಬರ್ 7 ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪ್ರಯಾಣ ಕೊನೆಗೊಂಡಿತು.
ಈ ಜೋಡಿ UAEಯ ಖವ್ಲಾ ಅಲ್ ರೊಮೈತಿ ನಿರ್ಮಿಸಿದ್ದ ಮೂರು ದಿನ 14 ಗಂಟೆ 46 ನಿಮಿಷ 48 ಸೆಕೆಂಡ್‌ಗಳ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನ ನಿರ್ಮಿಸಿದೆ. ಅವರು ಏಳು ಖಂಡಗಳಲ್ಲಿ ಏಷ್ಯಾ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕಾ, ದಕ್ಷಿಣ ಅಮೇರಿಕಾ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದರು.
Guinness World Record: An Indian couple has written a record for circumnavigating 7 continents in 73 hours.