Gujarat Election Result : ನಿರೀಕ್ಷೆ ತಲುಪದ ಆಪ್ – ಲೆಕ್ಕಕ್ಕಿಲ್ಲ ಓವೈಸಿ….
ಗುಜರಾತ್ ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸುವತ್ತ ದಾಪುಗಾಲಿಟ್ಟಿದೆ. ಮತ ಎಣಿಕೆಯ ಪ್ರಕಾರ ಬಿಜೆಪಿ 182 ಸ್ಥಾನಗಳ ಪೈಕಿ 52 ಸ್ಥಾನಗಳನ್ನು ಗೆದ್ದು 102ರಲ್ಲಿ ಮುಂದಿದೆ. ಇನ್ನೊಂದೆಡೆ ಕಾಂಗ್ರೆಸ್ ಹೀನಾಯ ಸ್ಥಿತಿಗೆ ತಲುಪಿದೆ. ಆಪ್ ಖಾತೆ ತೆರೆಯುವಲ್ಲಿ ಯಶಸ್ವಿಯದರೂ ನಿರೀಕ್ಷೆ ತಲುಪುವಲ್ಲಿ ಸೋತಿದೆ.
ಎಎಪಿನ ಮೂವರೂ ದೊಡ್ಡ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಇವರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಶುದನ್ ಗಧ್ವಿ, ಪಕ್ಷದ ರಾಜ್ಯ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪಾಟಿದಾರ್ ನಾಯಕ ಅಲ್ಪೇಶ್ ಕಥಿರಿಯಾ ಸೇರಿದ್ದಾರೆ. ಆದರೆ, ಪಕ್ಷವು ಎರಡು ಸ್ಥಾನಗಳನ್ನು ಗೆದ್ದು ಐದರಲ್ಲಿ ಮುನ್ನಡೆಯಲ್ಲಿದೆ.
ಓವೈಸಿ ಪಕ್ಷದ ಎಲ್ಲಾ 13 ಅಭ್ಯರ್ಥಿಗಳಿಗೆ ಸೋಲು
ಅಸಾದುದ್ದೀನ್ ಓವೈಸಿಯವರ ಪಕ್ಷವಾದ AIMIM ಮೊದಲ ಬಾರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಿತು. ಎಐಎಂಐಎಂ ಕೂಡ ಒಟ್ಟು 13ರಲ್ಲಿ ಇಬ್ಬರು ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷದ ಎಲ್ಲಾ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ.
Gujarat Election Result: App that did not meet expectations – Owaisi is not counted….








