Morbi Bridge: ಸೇತುವೆ ಬಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಪ್ರಧಾನಿ ಮೋದಿ….
ಗುಜರಾತ್ ಸೇತುವೆ ದುರಂತ ಅಪಘಾತ ಸಂಭವಿಸಿದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಮೋರ್ಬಿ ತಲುಪಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿನ ಸಿವಿಲ್ ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿ ಕ್ಷೇಮ ವಿಚಾರಿಸಿದ್ದಾರೆ.
ಇದಕ್ಕೂ ಮೊದಲು ನರೇಂದ್ರ ಮೋದಿಯವರು ಘಟನಾ ಸ್ಥಳಕ್ಕೆ ಆಗಮಿಸಿ ಮುರಿದುಬಿದ್ದ ಸೇತುವೆಗಳನ್ನ ಪರಿಶೀಲಿಸಿದರು. ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳನ್ನ ನರೇಂದ್ರ ಮೋದಿ ಭೇಟಿ ಮಾಡಿ ಮಾತನಾಡಲಿದ್ದಾರೆ.
ಅಕ್ಟೋಬರ್ 30 ರಂದು ಸಂಜೆ ಸಂಭವಿಸಿದ ಮೋರ್ಬಿ ಸೇತುವೆ ಅಪಘಾತದಲ್ಲಿ ಇದುವರೆಗೆ 135 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಸ್ಪತ್ರೆ ಆವರಣದಲ್ಲಿ ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ಥಳೀಯ ಜನರನ್ನು ಮೋದಿ ಭೇಟಿ ಮಾಡಿದರು.
ಅಪಘಾತದ ಮೂರನೇ ದಿನವಾದ ಮಂಗಳವಾರ, ನೌಕಾಪಡೆ ಮತ್ತು ಎನ್ಡಿಆರ್ಎಫ್ ತಂಡಗಳು ಮತ್ತೊಮ್ಮೆ ಮಚ್ಚು ನದಿಯಲ್ಲಿ ಮೃತ ದೇಹಗಳಿಗಾಗಿ ಹುಡುಕಾಟ ಆರಂಭಿಸಿವೆ. ಗುಜರಾತ್ನಲ್ಲಿ ಬುಧವಾರ ಒಂದು ದಿನದ ಶೋಕಾಚರಣೆ ಘೋಷಿಸಲಾಗಿದೆ.
Gujarat: PM Modi visits Morbi bridge collapse site