ಕಾರಿಗೆ ಮೂತ್ರ ಮಾಡಿದ ನಾಯಿ – ಕಟ್ಟಿಹಾಕಲು ಹೇಳಿದ ಮಾಲೀಕನಿಗೆ ಬಿತ್ತು ಗೂಸಾ..!
ಗುಜರಾತ್ : ಕಾರಿಗೆ ನಾಯಿ ಮೂತ್ರ ಮಾಡಿದಕ್ಕೆ ಅಸಮಾಧಾನಗೊಂಡ ಕಾರಿನ ಮಾಲಿಕ ನಾಯಿಯನ್ನು ಕಟ್ಟಿ ಹಾಕಿ ಎಂದ ಹಿನ್ನೆಲೆ ಆತನಿಗೆ ನಾಯಿಯ ಮಾಲೀಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ. ಹೌಸಿಂಗ್ ಸೊಸೈಟಿಯಲ್ಲಿರುವ ಕರ್ನಲ್ ಕಟೋಚ್ ಅವರು ತಮ್ಮ ಕಾರ್ ತೊಳೆದು ಮನೆಯಿಂದ ಹೊರಗೆ ನಿಲ್ಲಿಸಿದ್ದರು. ಆ ವೇಳೆ ಪಕ್ಕದ ಮನೆಯ ನಾಯಿ ಬಂದು ಕಾರಿಗೆ ಮೂತ್ರ ಮಾಡಿದೆ. ಇದರಿಂದ ಕೋಪಗೊಂಡು ಪಕ್ಕದ ಮನೆಗೆ ಹೋಗಿ ನಿಮ್ಮ ನಾಯಿಯನ್ನು ಮನೆಯೊಳಗೆ ಕಟ್ಟಿಕೊಳ್ಳಿ ಎಂದು ಹೇಳಿದ್ದಾರೆ.
ಇದರಿಂದ ಕುಪಿತಗೊಂಡಿರುವ ಪಕ್ಕದ ಮನೆಯ ಚಿರಾಗ್ ಮಲ್ಹೋತ್ರ ಮತ್ತು ಮಗ ಸನ್ನಿ ಮಲ್ಹೋತ್ರ ಆತನಿಗೆ ಮನಬಂದಂತೆ ಥಳಿಸಿ, ರಸ್ತೆಯಲ್ಲಿ ಕೆಡವಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನೂ ಅಲ್ಲಿ ಅನೇಕರು ಈ ನಾಯಿಯ ಬಗ್ಗೆ ಹಲವು ಬಾರಿ ದೂರಿದ್ದಾರೆ ಎನ್ನಲಾಗಿದೆ. ಅಷ್ಟಾದ್ರೂ ನಾಯಿಯನ್ನ ಕಟ್ಟಿಹಾಕದೇ ಬೇರೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ಹಲ್ಲೆ ಮಾಡಿದ ತಂದೆ-ಮಗನ ವಿರುದ್ಧ ಚಾಂದ್‍ಖೇಡ ಪೊಲೀಸ್ ಠಾಣೆಯಲ್ಲಿ ಕಾರ್ ಮಾಲೀಕರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.








