Gujarath Election : ಗುಜರಾತಿನಲ್ಲಿ ಮತ್ತೆ ನಮೋ ದರ್ಬಾರ್..??
ಇಂದು ನಡೆದ ಗುಜರಾತ್ ವಿಧಾನಸಭಾ ಚುನಾವಣೆಯ ಮತದಾನ ಈಗಷ್ಟೇ ಮುಗಿದಿದೆ..
ಈಗ ಗುಜರಾತ್ ನಲ್ಲಿ 182 ಸ್ಥಾನಗಳಿಗೆ ಮತದಾನ ಪ್ರಭುಗಳು ತಮ್ಮ ಮತವನ್ನ ಚಲಾಯಿಸಿದ್ದಾರೆ..
ಚುನಾವಣಾ ಸಮೀಕ್ಷೆಗಳು ಕೂಡ ಹೊರಬಿದ್ದಿದ್ದು , ಗುಜರಾತ್ ನಲ್ಲಿ ಈ ಬಾರಿ ಯಾವ ಪಕ್ಷಕ್ಕೆ ಮತದಾರ ಪ್ರಭುಗಳ ಆಶೀರ್ವಾದ ಸಿಗಲಿದೆ ಎಂಬ ಕುತೂಹಲವಿದೆ..
1995ರಿಂದ ಗುರಾತಿನಲ್ಲಿ ಬಿಜೆಪಿ ಸತತ 6 ವಿಧಾನಸಭಾ ಚುನಾವಣೆಯನ್ನು ಗೆದ್ದು ಬೀಗಿದ್ದು , ಇದೀಗ 7 ನೇ ಬಾರಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ..
ಮೋದಿಯ ಗುಜರಾತ್ ಪ್ರವಾಸ ಮತ್ತೆ ಖರ್ಗೆ ಮೋದಿ ಬಗ್ಗೆ ಲೇವಡಿ ಮಾಡಿದ್ದು , ಬಿಜೆಪಿಗೆ ವರದಾನವಾದಂತೆ ಕಾಣುತ್ತಿದೆ..
ಈಗಾಗಲೇ ಚುನಾವಣೋತ್ತರ ಸಮೀಕ್ಷೆ ಹೊರಗಡೆ ಬಂದಿದ್ದು , ಮತ್ತೊಮ್ಮೆ ಕಮಲ ಪಕ್ಷ ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಲಕ್ಷಣ ಕಂಡು ಬಂದಿದೆ..
ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸುವ ಎಲ್ಲಾ ಪ್ರಯತ್ನಗಳಿಗೆ ಸಮೀಕ್ಷೆ ಪ್ರಕಾರ ಹಿನ್ನೆಡೆಯಾಗಿದೆ..
ಇನ್ನೂ ಆಮ್ ಆದ್ಮಿ ಪಾರ್ಟಿ ಜನ ಸಾಮಾನ್ಯರಿಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದರೂ ಗುಜರಾತ್ ನಲ್ಲಿ ಸಮೀಕ್ಷೆ ಪ್ರಕಾರ ಜನರು AAP ಕಡೆ ಒಲವು ತೋರಿದಂತೆ ಕಂಡು ಬಂದಿಲ್ಲ..
ಇನ್ನೂ ಗುಜರಾತಿನಲ್ಲಿ ಕಾಂಗ್ರೆಸ್ ಗೆ ಪರ್ಯಾಯವಾಗಿ ಮುಂದಿನ ದಿನಗಳಲ್ಲಿ AAP ಹೊರಹೊಮ್ಮುವ ಲಕ್ಷಣಗಳು ಸಮೀಕ್ಷೆಯಲ್ಲಿ ಕಂಡುಬಂದಿದೆ..
2017ರಲ್ಲಿ ಬಿಜೆಪಿ 99 ಸೀಟುಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು..
ಆದ್ರೆ ಇದೀಗ ಪಿ ಮಾರ್ಕ್ ಚುನಾವಣಾ ಸಮೀಕ್ಷೆಯ ಪ್ರಕಾರ
ಬಿಜೆಪಿ 127ರಿಂದ 140 ,
ಕಾಂಗ್ರೆಸ್ 26 -36 ,
ಆಮ್ ಆದ್ಮಿ ಪಾರ್ಟಿ 9 -21 ಮತ್ತು
ಇತರೇ 0 -2
ಇನ್ನೂ
ಟಿವಿ9 ಸಮೀಕ್ಷೆ
ಬಿಜೆಪಿ 125 – 130
ಕಾಂಗ್ರೆಸ್ – 40 -50
ಆಮ್ ಆದ್ಮಿ ಪಾರ್ಟಿ – 3- 5
ಇತರೇ – 3 – 7
ಜನ್ ಕೀ ಬಾತ್ ಎಕ್ಸಿಟ್ ಪೋಲ್
ಬಿಜೆಪಿ 117 – 140
ಕಾಂಗ್ರೆಸ್ – 34 -51
ಆಮ್ ಆದ್ಮಿ ಪಾರ್ಟಿ 6 -13
ಇತರೇ – 1 – 2
ಸೀಟುಗಳನ್ನ ಪಡೆಯುವ ಅಂದಾಜು ಸಮೀಕ್ಷೆಯಲ್ಲಿ ಹೊರಹೊಮ್ಮಿದೆ..
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಮತದಾನದ ಫಲಿತಾಂಶ ಡಿಸೆಂಬರ್ 8 ರಂದು ಹೊರಬೀಳಲಿದೆ..