Gujarath Election Result : ಫಲಿತಾಂಶ ಆಘಾತಕಾರಿ – ಜಗದೀಶ್ ಠಾಕೂರ್
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ 2022 ನೇ ಸಾಲಿನ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ..
ಬೆಳಿಗ್ಗೆ ಇಂದಲೇ ಮತ ಎಣಿಕೆ ನಡೆಯುತ್ತಿದೆ..
ಗುಜರಾತ್ ನಲ್ಲಿ ಈಗಾಗಲೇ ಬಿಜೆಪಿ ಲೀಡ್ ನಲ್ಲಿದ್ದು , ಸತತ 7 ನೇ ಬಾರಿಗೆ ಗುಜರಾತ್ ನಲ್ಲಿ ಬಿಜೆಪಿಯೇ ಅಧಿಕಾರದ ಗದ್ದುಗೇರುವುದು ಖಚಿತವಾಗುತ್ತಿದೆ..
ಗುಜರಾತ್ ನಲ್ಲಿ
ಬಿಜೆಪಿ – 154
ಕಾಂಗ್ರೆಸ್ – 19
ಆಪ್ – 0 5
ಇತರೇ – 04
ಡಿಸೆಂಬರ್ 12 ರಂದು ಮುಂದಿನ ಗುಜರಾತ್ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಅಂತ ಹೇಳಲಾಗ್ತಿದೆ..
ಇತ್ತ ಗುಜರಾತ್ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುತ್ತಿದ್ದ ಹಾಗೆ ಕಾಂಗ್ರೆಸ್ ಸೋಲಿಗೆ ಏನೆಲ್ಲಾ ಕಾರಣಗಳಿರಬಹುದು , ಬಿಜೆಪಿ ಗೆಲುವಿಗೆ ಏನೆಲ್ಲಾ ಕಾರಣಗಳು ಎಂದೆಲ್ಲಾ ಚರ್ಚೆಗಳಾಗುತ್ತಿದೆ.. ರಾಜಕೀಯ ಮುಖಂಡರುಗಳು ಕೂಡ ಪ್ರತಿಕ್ರಿಯೆ ನೀಡುತ್ತಿದ್ದಾರೆ..
ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೂರ್ ಅವರು ಮಾತನಾಡಿ ಫಲಿತಾಂಶ ಆಘಾತಕಾರಿ ಎಂದಿದ್ದಾರೆ..
” ನಮ್ಮಲ್ಲಿ ಯಾವುದೇ ಕೊರತೆಯಿಲ್ಲ ಎಂದು.. ಆದರೆ ಈ ಫಲಿತಾಂಶಗಳು ಆಘಾತಕಾರಿಯಾಗಿದೆ” ಎಂದು ಠಾಕೋರ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಜನರ ಮತ ಮುಖ್ಯ ಎಂದಿರುವ ಅವರು “ಕಾಂಗ್ರೆಸ್ ತೀವ್ರವಾಗಿ ಹೋರಾಡಿದೆ. ಆದರೆ ಅದಾದರೂ ನಾವು ಸರ್ಕಾರ ರಚಿಸುವಲ್ಲಿ ವಿಫಲರಾಗಿದ್ದೇವೆ. ರ್ಕಾರ ರಚಿಸಲು ಹೊರಟಿರುವವರಿಗೆ ನನ್ನ ಅಭಿನಂದನೆಗಳು” ಎಂದರು..








