ಕೊರೊನಾದಿಂದ ಆಸ್ಪತ್ರೆ ಆಸ್ಪತ್ರೆ ಸೇರಿದ್ದ ಅಪ್ಪ ವಾಪಸ್ ಬರೋ ಅಷ್ಟರಲ್ಲಿ ಮಗು ಅನಾಥಾಶ್ರಮ ಸೇರಿತ್ತು..!
ಗುಜರಾತ್: ತಂದೆಯೊಬ್ಬರು ಕೊರೊನಾ ಸೋಂಕಿನ ಕಾರಣ ಅನಾಥಾಶ್ರಮ ಸೇರಿದ್ದ ವೇಳೆ ಮನೆವರೆಲ್ಲಾ ಸೇರಿ ಆತನ ಮಗಳನ್ನ ಅನಾಥಾಶ್ರಮಕ್ಕೆ ಸೇರಿಸಿಬಿಟ್ಟಿದ್ದರು. ಬಳಿಕ ಆತ ಆಸ್ಪತ್ರೆಯಿಂದ ಮನೆಗೆ ಬಂದಾಗ ಮಗು ಸತ್ತು ಹೋಗಿದೆ ಅಂತ ಸುಳ್ಳು ಹೇಳಿದ್ದರು. ಆದರೆ ಮಗಳು ಸತ್ತಿದ್ದಾಳೆ ಅನ್ನೋ ವಿಚಾರವನ್ನ ನಂಬಲೂ ತಯಾರಿಲ್ಲದ ಆತ ಮಗಳನ್ನ ಕಷ್ಟ ಪಟ್ಟು ಹಹುಡುಕಾಡಿದ್ದಾನೆ. ಕೊನೆಗೂ ಹೇಗೋ ಮಗಳು ಅನಾಥಾಶ್ರಮದಲ್ಲಿ ಸಿಕ್ಕಿದ್ದಾಳೆ. ಆದ್ರೆ ಆಕೆಯನ್ನ ತಂದೆಯ ಜೊತೆಗೆ ಕಳುಹಿಸಲು ಪೊಲೀಸರು ಅನಾಥಾಶ್ರಮ ಅಧಿಕಾರಿಗಳು ಒಪ್ಪಿರಲಿಲ್ಲ. ಬಳಿಕ ಮಗಳನ್ನ ವಾಪಸ್ ಪಡೆಯಲು ಅಪ್ಪ ಸೀದಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೊನೆಗೂ ಕಾನೂನು ಬದ್ಧವಾಗಿ ಹೋರಾಡಿ ಮಗಳನ್ನ ಮರಳಿ ವಾಪಸ್ ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ. ಗುಜರಾತ್ ನಲ್ಲಿ ಇಂತಹದೊಂದು ಘಟನೆ ನಡೆದಿದೆ.
ಕೆಲಸಕ್ಕೆ ಸೇರುತ್ತಿದ್ದಂತೆ ಮತ್ತೊಬ್ಬನ ಪ್ರೀತಿಸಿದಳು… ಮಾಜಿ ಪ್ರಿಯಕರ ಮಾಡಿದ್ದೇನು…!
ಗುಜರಾತ್ನ ಖೇದಾ ನಗರದ 35 ವರ್ಷದ ನಿವಾಸಿ ಅಹಮದಾಬಾದ್ನ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಇವರಿಬ್ಬರಿಗೆ ಜುಲೈನಲ್ಲಿ ಹೆಣ್ಣು ಮಗು ಕೂಡ ಜನಿಸಿತ್ತು. ಈ ಮಗುವನ್ನ ಆತನಿಗೆ ನೀಡಲು ಮಹಿಳೆ ಒಪ್ಪಿಗೆಯನ್ನೂ ನೀಡಿದ್ದಳು. ಆದ್ರೆ ಈತನ ತಾಯಿಗೆ ಮಗು ಮನೆಗೆ ಬರೋದು ಇಷ್ಟವಿರಲಿಲ್ಲ. ಮಗು ಮನೆಗೆ ಬಂದ ಕೇವಲ 5 ದಿನದಲ್ಲಿ ಆತ ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಪೂರ್ತಿಯಾಗಿ ಗುಣಮುಖರಾಗಿ 2 ವಾರ ಬಿಟ್ಟು ಮನೆಗೆ ವಾಪಸ್ಸಾದಾಗ ಮಗು ನಾಪತ್ತೆಯಾಗಿತ್ತು. ಆಗ ಆತನ ತಾಯಿ ಮಗು ಅನಾರೋಗ್ಯದಿಂದ ಸತ್ತು ಹೋಗಿದೆ ಎಂದು ಸುಳ್ಳು ಹೇಳಿದ್ದಳು. ಆದರೆ ಆಕೆಯ ಮಾತಲ್ಲಿ ನಂಬಿಕೆ ಇಲ್ಲದ ಆ ವ್ಯಕ್ತಿ ಮಗುವಿಗಾಗಿ ಹುಡುಕಾಡದ ಜಾಗವಿಲ್ಲ. ಕಡೆಗೆ ಆತನಿಗೆ ತನ್ನ ಮಗು ಅಹಮದಾಬಾದ್ನ ಮಹಿಪಾತ್ರಂ ರೂಪ್ರಂ ಆಶ್ರಮದಲ್ಲಿ ಇದೆ ಎಂಬ ವಿಚಾರ ತಿಳಿದು ಬಂದಿದೆ. ಬಳಿಕ ತೆರಳಿ ಅನೇಕ ಕಷ್ಟಗಳನ್ನ ಎದುರಿಸಿ ಕಡೆಗೂ ಮಗುವನ್ನ ವಾಪಸ್ ತನ್ನೊಂದಿಗೆ ಕರೆದೊಯ್ದಿದ್ದಾನೆ.
ಮಗಳ ಮದುವೆಗಾಗಿ ತಂದಿದ್ದ ಬಟ್ಟೆ, ಪಾತ್ರೆ, ದಿನಸಿ ದೋಚಿದ ಕಳ್ಳರು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








