ಊಟ ಕೊಡಿಸುತ್ತೇನೆಂದು ಹೋಟೆಲ್ ಗೆ ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿದ ಪಾಪಿ
ಊಟ ಕೊಡಿಸುವ ನೆಪದಲ್ಲಿ ಹೆಂಡತಿಯನ್ನ ಹೋಟೆಲ್ ಗೆ ಕರೆದೊಯ್ದ ಪತಿಯೊಬ್ಬ ಆಕೆಯನ್ನ 500 ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಹೋಟೆಲ್ ನಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂಪಾಯಿಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ. ಆತನ ಹೆಂಡತಿಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಎಳೆದೊಯ್ದು ಹೋಗಿ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತೆಯು ಈ ಸಂಬಂಧ ದೂರು ಸಲ್ಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.








