ಗುಜರಾತ್ ಸಿಎಂ ವಿಜಯ್ ರೂಪಾನಿ ಧಿಡೀರ್ ರಾಜಿನಾಮೆ – ಅವಧಿಗೂ ಮೊದಲೇ ರಾಜಿನಾಮೆ ನೀಡಿದಕ್ಕೆ ಕಾರಣವೇನು..?
ಗುಜರಾತ್ : ಗುಜರಾತ್ ನ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಧಿಡೀರ್ ರಾಜಿನಾಮೆ ( sep 11) ಘೋಷಿಸುವ ಮೂಲಕ ತಮ್ಮ ಬೆಂಬಲಿಗರಿಗೆ ಶಾಕ್ ಕೊಟ್ಟಿದ್ದಾರೆ.
ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿ ಮಾಡಿದ ವಿಜಯ್ ರೂಪಾನಿ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಅಂದ್ಹಾಗೆ ವಿಜಯ್ ರೂಪಾನಿ ಅವರ ಅಧಿಕಾರವಧಿ ಮುಂದಿನ ವರ್ಷ ಕೊನೆಗೊಳ್ಳಬೇಕಿತ್ತು. ಆದ್ರೆ ಧಿಡೀರ್ ಆಗಿ ಈ ನಿರ್ಧಾರಕ್ಕೆ ಬಂದಿರುವುದಕ್ಕೆ ಕಾರಣ ನಿಗೂಢವಾಗಿದೆ.
ಆದ್ರೆ ಮೂಲಗಳ ಪ್ರಕಾರ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್. ಪಾಟೀಲ್ ಜೊತೆಗಿನ ಭಿನ್ನಾಭಿಪ್ರಾಯಗಳೇ ಇದರ ಹಿಂದಿನ ಕಾರಣ ಅನ್ನುವ ಗುಸುಗುಸು ಶುರುವಾಗಿದೆ.
ರೂಪಾನಿ ಅವರು 2017ರ ಡಿಸೆಂಬರ್ ನಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಈ ಬಗ್ಗೆ ಮಾತನಾಡಿದ ಅವರು ಇಷ್ಟು ದಿನ ಸಿಎಂ ಆಗಿ ಕೆಲಸ ಮಾಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.








