ಮುಂದಿನ ಉಪರಾಷ್ಟ್ರಪತಿಗಳಾಗ್ತಾರಾ…. ಗುಲಾಂ ನಬಿ ಆಜಾದ್…?
ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಉನ್ನತಮಟ್ಟದ ಸಭೆ ನಡೆಸಿದೆ. ಈ ಸಭೆಯಲ್ಲಿ ಬಿಜೆಪಿಯು ಮುಂದಿನ ಉಪರಾಷ್ಟ್ರಯಾಗಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನ ಆಯ್ಕೆ ಮಾಡಿದೆ ಎಂದು ಹೇಳಲಾಗ್ತಿದೆ.
ಜೆಪಿ ವತಿಯಿಂದ ಗುಲಾಂ ನಬಿ ಆಜಾದ್‍ರನ್ನು ರಾಜ್ಯಸಭೆಗೆ ನಾಮಿನೇಟ್ ಮಾಡಿ, ಉಪರಾಷ್ಟ್ರಪತಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡುವ ಬಗ್ಗೆ ತಯಾರಿಗಳು ನಡೆದಿವೆ ಎಂದು ವರದಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಪಂಚರಾಜ್ಯ ಚುನಾವಣೆ ಬಳಿಕ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ ಎಂದು ವರದಿಯಾಗಿದೆ.








