ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪ್ರದೇಶದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಮತ್ತೆ ಗುಂಡಿನ ಚಕಮಕಿ ಸಂಭವಿಸಿರುವ ಘಟನೆ ವರದಿಯಾಗಿದೆ. ಕುಲ್ಲಾಮ್ ಜಿಲ್ಲೆಯ ಟ್ಯಾಂಗ್ ಮಾರ್ಗ್ ಪ್ರದೇಶದಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿರುವ ಹಿನ್ನೆಲೆ, ಭಾರತೀಯ ಸೇನೆ ಕೂಡ ತಕ್ಷಣವೇ ಪ್ರತಿದಾಳಿ ನಡೆಸಿದ್ದು, ಸ್ಥಳದಲ್ಲಿ ತೀವ್ರ ಗುಂಡಿನ ಚಕಮಕಿ ನಡೆದಿದೆ.
ಸದ್ಯದ ಮಾಹಿತಿಯಂತೆ, ಸೇನಾ ದಳಗಳು TRF (The Resistance Front) ಎಂಬ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ನನ್ನು ಸುತ್ತುವರೆದಿದ್ದು, ಆತನ ಬಂಧನ ಅಥವಾ ಹತ್ಯೆಗೆ ಉದ್ದೇಶಿತ ಕಾರ್ಯಾಚರಣೆ ಮುಂದುವರೆದಿದೆ.
ಈ ಮಧ್ಯೆ, ಭಯೋತ್ಪಾದಕರು ಮಂಗಳವಾರ ಪ್ರವಾಸಿಗರ ಮೇಲೆ ನಡೆಸಿದ ಅಮಾನವೀಯ ದಾಳಿಯಿಂದಾಗಿ ಸ್ಥಳೀಯರು ಹಾಗೂ ಭದ್ರತಾ ಘಟಕಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಾಳಿಗೆ ಪ್ರತೀಕಾರವಾಗಿ ಖಡಕ್ ಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒತ್ತಾಯಿಸಿದ್ದು, ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗುತ್ತಿದೆ.
ಅತಂತ್ರ ಪರಿಸ್ಥಿತಿಯಲ್ಲಿ ಶಾಂತಿ ಸ್ಥಾಪನೆಗಾಗಿ ಭದ್ರತಾ ಪಡೆಗಳು ಹಗಲು-ರಾತ್ರಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ದೇಶದ ಶಾಂತಿ-ಸುರಕ್ಷತೆಯ ಜೊತೆ ಆಟವಾಡುವ ಉಗ್ರ ಕೃತ್ಯಗಳಿಗೆ ನಿರ್ವಿಕಾರ ತಡೆಯನ್ನು ನೀಡಲು ಸಿದ್ಧವಾಗಿವೆ.








