‘ನನ್ನ ಶಾಪ ನಿಮಗೆ ಕೊನೆಯವರೆಗೂ ನೋವು ಕೊಡಲಿ , ಕೊರೊನಾ ಕಳುಹಿಸಿದ ಯಡಿಯೂರಪ್ಪ-ವಿಜಯೇಂದ್ರಗೆ ಧನ್ಯವಾದ’ – ಗುರುಪ್ರಸಾದ್

1 min read

‘ನನ್ನ ಶಾಪ ನಿಮಗೆ ಕೊನೆಯವರೆಗೂ ನೋವು ಕೊಡಲಿ , ಕೊರೊನಾ ಕಳುಹಿಸಿದ ಯಡಿಯೂರಪ್ಪ-ವಿಜಯೇಂದ್ರಗೆ ಧನ್ಯವಾದ’ – ಗುರುಪ್ರಸಾದ್

ಬೆಂಗಳೂರು : ಸ್ಯಾಂಡಲ್ ವುಡ್ ನ ನಿರ್ದೇಶಕ ಗುರುಪ್ರಸಾದ್ ಅವರಿಗೆ ಕೊರೊನಾ ಪಾಸಿಟಿವ್ ಬಮದಿದೆ. ಇದರ ಬೆನ್ನಲ್ಲೇ ಗುರುಪ್ರಸಾದ್ ಅವರು ಫೇಸ್ ಬುಕ್ ಲೈವ್ ಗೆ ಬಂದು ಸರ್ಕಾರ, ಸಿಎಂ ಯಡಿಯೂರಪ್ಪ, ಅವರ ಪುತ್ರ ಬಿ ವೈ ವಿಜಯೇಂದ್ರ , ಆರೋಗ್ಯ ಸಚಿವ ಸುಧಾಕರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, ನಾನು ಸತ್ತರೆ ಅದಕ್ಕೆ ಸರ್ಕಾರ ಹೊಣೆ ಎಂದಿದ್ದಾರೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು, ಸಾವನ್ನು ತಡೆಯಲು ವಿಫಲವಾದ ಸರ್ಕಾರದ ವಿರುದ್ಧ ಗುರುಪ್ರಸಾದ್ ಕಿಡಿ ಕಾರಿದ್ದಾರೆ. ನನ್ನ ಸಾವಿಗೆ ಈ ಮೂವರೇ ಕಾರಣ ಎಂದು ಡೆತ್ ಬರೆಯುವುದಾಗಿ ಹೇಳಿದ್ದಾರೆ. ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಮನೆವರೆಗೂ ಕೊರೊನಾ ಕಳುಹಿಸಿದ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ಅವರಿಗೆ ಧನ್ಯವಾದ ತಿಳಿಸಿ ವ್ಯಂಗ್ಯವಾಡಿದ್ದಾರೆ. ಎಷ್ಟು ಕೋಟಿ ಬೇಕು, ನಿಮ್ಮ ಕೋಟಿ ಎಂದರೆ ಬಡವರ ಮನೆಯ ಒಂದೊಂದು ಇಡ್ಲಿಯನ್ನು ತಂದು ನಿಮ್ಮ ಲಾಕರ್‌ ನಲ್ಲಿ ಇಡುತ್ತಿದ್ದೀರಿ. ದರಿದ್ರ ಜೀವನ ನಡೆಸಿಲಿಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.b s yediyurappa

ಒಂದು ವೇಳೆ ನಾನು ಸತ್ತರೆ ನನ್ನ ಶಾಪ ಕೊನೆವರೆಗೂ ನಿಮಗೆ ನೋವು ಕೊಡಬೇಕು ಎಂದು ಮಾತನಾಡುತ್ತಿದ್ದೀನಿ. ಒಂದೂವರೆ ವರ್ಷ ಸಮಯ ತೆಗೆದುಕೊಂಡು, 2 ತಿಂಗಳೂ ಲಾಕ್ ಡೌನ್ ಮಾಡಿ ಏನು ಮಾಡಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ನಿಮಗೆ ಕೋಟಿ ಕೋಟಿ ಹಣ ಬಂದಿದೆ ಅಂತ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ತಳ್ಳಬೇಡಿ ಎಂದು ಬೇಡಿಕೊಂಡಿದ್ದಾರೆ. ನನಗೆ ಕೊರೊನಾ ತಂದುಕೊಟ್ಟ ನಿಮಗೆ ಧಿಕ್ಕಾರವಿರಲಿ ತುಂಬಾ ಜನರನ್ನು ಸಾಯಿಸಿದ್ದಾರೆ, ಒಂದೂವರೇ ವರ್ಷವಾದರೂ ಏನು ಮಾಡಿಲ್ಲ. ನನ್ನಂತವರಿಗೆ

ಕೊಟ್ಟಿದ್ರೆ ಏನೋ ಮಾಡುತ್ತಿದ್ದೆ. ಇನ್ನು ಎಷ್ಟು ಕೋಟಿ ನಿಮಗೆ, ಕೊರೊನಾ ಬಂದರು ಪಾಠ ಕಲಿತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ರಾಜಕೀಯ ಮಾಡಬೇಡಿ, ಆಡಳಿತ ಮಾಡಿ ಎಂದು ರಾಜಕೀಯ ವ್ಯಕ್ತಿಗಳನ್ನು ಮನವಿ ಮಾಡಿದ್ದಾರೆ. ಹಾಗೆ ಆದರೆ ಎಲ್ಲರು ಸಾಯಿಸುತ್ತಾರೆ, ಹೀಗೆ ಆದರೆ ಮನೆಮನೆಗೆ ಎರಡು ಸಾವು ಆಗುತ್ತೆ ಎಂದು ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಆದ ಪ್ರತಿಯೊಂದು ಸಾವಿಗೂ ಡಾ. ಸುಧಾಕರ್ ಕಾರಣ ಎಂದು ಬಹಿರಂಗವಾಗಿ ಹೇಳಿದ್ದಾರೆ. ಈ ನೋವು ಸುಮ್ಮನೆ ಬಿಡಲ್ಲ ಎಂದಿದ್ದಾರೆ.Dr K Sudhakar

ಇತ್ತ ಸಮಾಜಿಕ ಜಾಲತಾಣಗಲಲ್ಲಿ ಮಾತ್ರ ಬೇರೆಯದ್ದೇ ಚರ್ಚೆಗಳು ಗಾಸಿಫ್ ಗಳಿವೆ. ಅದೇನೆಂದ್ರೆ ಗುರು ಪ್ರಸಾದ್ ಅವರು ಸರ್ಕಾರದ ವಿರುದ್ಧ ವಿಡಿಯೋ ಮಾಡಿ ಮಾತನಾಡಿ ಆಕ್ರೋಶ ಹೊರಹಾಕಿರುವುದು ತಮ್ಮತ್ತ ಗಮನ ಸೆಲೆಯುವುದಕ್ಕೆ, ಲೈಮ್ ಲೈಟ್ ಅಲ್ಲಿರುವುದಕ್ಕೆ, ತಮ್ಮ ಮುಂದಿನ ಸಿನಿಮಾ ರಂಗನಾಯಕಿಗೆ ಪ್ರಚಾರ ಗಿಟ್ಟಿಸಿಕೊಡುವುದಕ್ಕೆ ಎಂದೇ ಹೇಳಲಾಗ್ತಿದೆ.

ಗುರು ಪ್ರಸಾದ್ ರಂಗನಾಯಕ ಎಂಬ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾ ಶುರುವಾಗಬೇಕಿದೆ. ಈ ಹಿನ್ನೆಲೆ ರಂಗನಾಯಕ ಚಿತ್ರದ ಪ್ರಚಾರಕ್ಕಾಗಿ ಇದೆಲ್ಲಾ ಮಾಡ್ತಿದ್ದಾರೆ ಎಂದೇ ಹೇಳಲಾಗ್ತಿದೆ. ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗುರುಪ್ರಸಾದ್ ಅವರು ರೀ, ನಾನು ಇದ್ರೆ ಅಲ್ವೇನ್ರಿ ರಂಗನಾಯಕ. ನಿರ್ಮಾಪಕ ಬಂಡವಾಳ ಹಾಕಿದ್ದಾನೆ, ಆಕ್ಟರ್ ಕಾಯ್ತಿದ್ದಾರೆ, ನಾನು ಬದುಕಿದ್ರೆ ಅಲ್ವೇನ್ರಿ, ಒಬ್ಬರೊಬ್ಬರು ಬದುಕುವುದು ಮುಖ್ಯ ಅಲ್ವಾ ಎಂದಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd