ಕೆರೆಬಿಯನ್ ಪ್ರೀಮಿಯರ್ ಲೀಗ್ ನ ನತದೃಷ್ಟ ತಂಡ ಗಯಾನ ಅಮೇಝಾನ್ ವಾರಿಯರ್ಸ್
ಕೆರೆಬಿಯನ್ ಪ್ರೀಮಿಯರ್ ಲೀಗ್ ನ ನತದೃಷ್ಟ ತಂಡ ಅಂದ್ರೆ ಅದು ಗಯಾನ ಅಮೇಝಾನ್ ವಾರಿಯರ್ಸ್. ಎದುರಾಳಿ ತಂಡಗಳಿಗೆ ಅಪಾಯಕಾರಿಯಾಗಿರುವ ಗಯಾನ ವಾರಿಯರ್ಸ್ ಪ್ರಶಸ್ತಿ ಹಂತದಲ್ಲಿ ಎಡವುತ್ತಿರುವ ಅಪಕೀರ್ತಿಯೂ ಇದೆ. ಗಯಾನ ಅಮೇಝಾನ್ ವಾರಿಯರ್ಸ್ ತಂಡ ಇನ್ನೂ ನಾಯಕನನ್ನು ಆಯ್ಕೆ ಮಾಡಿಲ್ಲ. ತಂಡದಲ್ಲಿ ರಾಸ್ ಟೇಲರ್, ಚಂದ್ರಪಾಲ್ ಹೇಮ್ರಾಜ್, ಶಿಮ್ರೋನ್ ಹೇಟ್ಮೇರ್, ನಿಕೋಲಾಸ್ ಪೂರನ್, ಇಮ್ರಾನ್ ತಾಹೀರ್ನಂತಹ ಸ್ಟಾರ್ ಆಟಗಾರರು ಇದ್ದಾರೆ. ಜೊಹಾನ್ ಬೋತಾ ಅವರು ತಂಡದ ಹೆಡ್ ಕೋಚ್ ಆಗಿದ್ದಾರೆ.
2013ರಿಂದ 2019ರವರೆಗೆ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಅದ್ಭುತ ಪ್ರದರ್ಶನವನ್ನೇ ನೀಡಿದೆ. ಆದ್ರೆ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಏಳು ಟೂರ್ನಿಗಳಲ್ಲಿ ಐದು ಬಾರಿ ಫೈನಲ್ ಪ್ರವೇಶಿಸಿದೆ. ಆದ್ರೆ ಐದು ಬಾರಿಯೂ ಗಯಾನ ತಂಡ ರನ್ನರ್ ಅಪ್ಗೆ ಸಮಾಧಾನಪಟ್ಟುಕೊಳ್ಳಬೇಕಾಯ್ತು. 2013, 2014, 2016, 2018 ಮತ್ತು 2019ರಲ್ಲಿ ಫೈನಲ್ಗೆ ಪ್ರವೇಶಿಸಿ ನಿರಾಸೆ ಅನುಭವಿಸಿತ್ತು. ಆಗಸ್ಟ್ 18ರಿಂದ ಸೆಪ್ಟಂಬರ್ 10ರವರೆಗೆ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯಲಿದೆ.
ಗಯಾನ ಅಮೇಝಾನ್ ವಾರಿಯರ್ಸ್
ಇಮ್ರಾನ್ ತಾಹೀರ್, ನಿಕೊಲಾಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರೋನ್ ಹೆಟ್ಮೇರ್, ಕ್ರಿಸ್ ಗ್ರೀನ್, ಕಿಸೂಂದತ್ ಮಗ್ರಾಮ್, ಕಿಮೋ ಪೌಲ್, ಶೆರ್ಫಾನ್ ರುಥರ್ ಫೆÇೀರ್ಡ್, ರೊಮಾರಿಯೊ ಶೇಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೇಮ್ರಾಜ್, ಕೇವಿನ್ ಸಿಂಕ್ಲೆರ್, ಆಶೆಮೆಡ್ ನೆಡ್, ಒಡೆನ್ ಸ್ಮಿತ್, ಆಂಟನಿ ಬ್ರಾಂಬ್ಲೆ, ಜಸ್ದೀಪ್ ಸಿಂಗ್