ಬೆಂಗಳೂರು: ಜಿಮ್ ಟ್ರೈನರ್ ಪತ್ನಿಗೆ ಹೆದರಿಸಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಪತ್ನಿಗೆ ಹೆದರಿಸುವ ಸಂದರ್ಭದಲ್ಲಿ ಪತಿ (husband) ಅಚಾನಕ್ಕಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್(28) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದೆ. ಅಮಿತ್ ಕುಮಾರ್ ಜಿಮ್ ಟ್ರೈನರ್ (Gym trainer) ಆಗಿದ್ದು, 10 ವರ್ಷಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ.
ಜಿಮ್ ಹತ್ತಿರವೇ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಮದುವೆಯಾದ ನಂತರ ಪತ್ನಿಯ ಆಸೆಯಂತೆ ನರ್ಸಿಂಗ್ ಕೋರ್ಸ್ ಗೆ ಸೇರಿಸಿದ್ದ. ಆದರೆ, ಪತ್ನಿ ಸರಿಯಾಗಿ ಸಮಯ ನೀಡುತ್ತಿಲ್ಲ ಎಂದು ಆರೋಪಿಸಿದ್ದ. ಪತ್ನಿ ಫ್ರೆಂಡ್ಸ್ ಜೊತೆ ಫೋನ್ ನಲ್ಲಿ ಯಾವಾಗಲೂ ಮಾತನಾಡುತ್ತಾಳೆ ಎಂದು ಆತ ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿಯೇ ಪತ್ನಿಯು ಪತಿಯನ್ನು ತೊರೆದು ಬೇರೆಡೆ ವಾಸಿಸುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಪತಿ ಮನೆಗೆ ಮರಳಿ ಬರುವಂತೆ ಪದೇ ಪದೇ ಕರೆ ಮಾಡುತ್ತಿದ್ದ. ಹೀಗೆ ಕಾಲ್ ಮಾಡಿ ಹೆದರಿಸುತ್ತಿದ್ದಾಗಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು