ಮಣ್ಣಿನ ಮಗ ಅಂತಾ ಮೊದಲು ಕರೆದಿದ್ದು ಯಾರು..? ಹೆಚ್ ಡಿ ಡಿ ಹೇಳಿದ್ದೇನು..? H D Devegouda saaksha tv
ತುಮಕೂರು : ಮಣ್ಣಿನ ಮಗ ಎಂದು ಯಾರು ಯಾವಾಗ ಹೇಳಿದ್ರೋ ಗೊತ್ತಿಲ್ಲ. ಜನರಿಗೆ ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕರೆಯುತ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ ಡಿ ದೇವೇಗೌಡ ಅವರು ಇಂದು ತುಮಕೂರಿನ ಬಳಗೆರೆಗೆ ಭೇಟಿ ನೀಡಿದ್ದರು. ಈ ವೇಳೆ ಜೆಡಿಎಸ್ ಪಕ್ಷ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿದ ಅವರು, ಮಣ್ಣಿನ ಮಗ ಅಂತಾ ನನ್ನ ತಂದೆ ನನಗೆ ನಾಮಕರಣ ಮಾಡಿಲ್ಲ. ಯಾರು ನಾಮಕರಣ ಮಾಡಿದ್ರೋ ನನಗೆ ಗೊತ್ತಿಲ್ಲ. ನನ್ನ ಮೇಲೆ ಪ್ರೀತಿ ಹಾಗೂ ಹೋರಾಟದ ಮೇಲೆ ನಂಬಿಕೆಯಿಂದ ಹಾಗೆ ಕರೆಯುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂದು ಭಾನುವಾರ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ನಾವು 7 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ಎಲ್ಲಾರು ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.