ಎಸ್ಪಿ ಸಂತೋಷ್ ಬಾಬು ಅವರಿಗೆ ಹರಿಹಾಯ್ದ ಹೆಚ್. ಡಿ. ಕೆ Saaksha Tv
ರಾಮನಗರ: ಅದೇ ನಿಮ್ಮ ಗೋವಿಂದರಾಜು ಎನ್ನುವ ಸಿಬ್ಬಂದಿ 500 ಬಾಟೆಲ್ ಜೊತೆ ಸಿಕ್ಕಿಬಿದ್ದವರನ್ನು ಬೇಲ್ ಕೊಟ್ಟು ಕಳುಹಿಸಿದ್ದಾರೆ ಎಂದು ರಾಮನಗರ ಎಸ್.ಪಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಮನಗರದಲ್ಲಿ ನಿನ್ನೆ ಹೊಲದಲ್ಲಿ ಕೆಲಸ ಮಾಡಿ ಕುಡಿಯಲು 20 ಬಾಟೆಲ್ ಮದ್ಯ ಇಟ್ಟುಕೊಂಡಡಿದ್ದಕ್ಕೆ ರೈತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೀರಿ. ಅದೇ ನಿಮ್ಮ ಗೋವಿಂದರಾಜು ಎನ್ನುವ ಸಿಬ್ಬಂದಿ 500 ಬಾಟೆಲ್ ಜೊತೆ ಸಿಕ್ಕಿಬಿದ್ದವರನ್ನು ಬೇಲ್ ಕೊಟ್ಟು ಕಳುಹಿಸಿದ್ದಾರೆ. ಒಬ್ಬರಿಗೊಂದು ನ್ಯಾಯ ಮಾಡತಿರಾ ಎಂದು ಎಸ್ಪಿ ಸಂತೋಷ್ ಬಾಬು ಅವರಿಗೆ ಹರಿಹಾಯ್ದರು.
ನನ್ನ ಕ್ಷೇತ್ರದಲ್ಲಿ ಬಂದು ನೀವೇನು ಸೆಕ್ಯೂರಿಟಿ ಕೊಡಬೇಕಿಲ್ಲ. ಕಾಂಗ್ರೆಸ್ ಪರವಾಗಿ ಕೆಲಸ ಮಾಡಬೇಡಿ. ಪಕ್ಷಾತೀತವಾಗಿ ಕೆಲಸ ಮಾಡಿ. ಇಲ್ಲದಿದ್ದರೆ ನಾನು ವಿಧಾನಸಭೆಯಲ್ಲೇ ಈ ಬಗ್ಗೆ ಮಾತನಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯ ಪ್ರಸನ್ನ ಎಂಬುವರನ್ನು ಅಂಗಡಿಯಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ಆರೋಪದಡಿ ಪೋಲಿಸರು ಬಂಧಿಸಿದ್ದರು. ಈ ಕುರಿತು ಜೆಡಿಎಸ್ ಕಾರ್ಯಕರ್ತರು ದೂರಿದ ಹಿನ್ನಲೆಯಲ್ಲಿ ಕುಮಾರಸ್ವಾಮಿಯವರಿಗೆ ದೂರು ನೀಡಿದ್ದರು. ಈ ಕುರಿತು ಮಾಧ್ಯಮಗಳ ಎದುರೇ ಎಸ್ಪಿ ಸಂತೋಷ್ ಬಾಬು ಅವರಿಗೆ ಕರೆ ಮಾಡಿ ಮಾತನಾಡಿದರು.