ಅಂಬಿ ಸ್ಮಾರಕ ಆಗಲು ಕಾರಣವೇ ಕುಮಾರಸ್ವಾಮಿ : ಡಿ.ಸಿ.ತಮ್ಮಣ್ಣ
ಮಂಡ್ಯ : ಸ್ಮಾರಕ ಆಗಲು ಕಾರಣವೇ ಕುಮಾರಸ್ವಾಮಿ. ಅವರು ಇಲ್ಲ ಅಂದಿದ್ರೆ ಅಂಬರೀಶ್ ಸ್ಮಾರಕ ಆಗುತ್ತಿರಲಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಜೆಡಿಎಸ್ ವರ್ಸಸ್ ಸುಮಲತಾ ನಡುವೆ ಮಾತಿನ ಸಮರ ತಾರಕ್ಕೇರಿದ್ದು, ಈ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಡಿ.ಸಿ.ತಮ್ಮಣ್ಣ, ಅಂಬರೀಷ್ ಸ್ಮಾರಕ ಆಗಲು ಕಾರಣವೇ ಕುಮಾರಸ್ವಾಮಿ. ಅವರು ಇಲ್ಲ ಅಂದಿದ್ರೆ ಅಂಬರೀಶ್ ಸ್ಮಾರಕ ಆಗುತ್ತಿರಲಿಲ್ಲ.
ವಿಷ್ಟುವರ್ಧನ್ ಅವರ ಸ್ಮಾರಕಕ್ಕೆ ಯಾವ ಸರ್ಕಾರದಿಂದಲೂ ಜಾಗ ಕೊಡೋಕೆ ಆಗಿಲ್ಲ. ಕುಮಾರಸ್ವಾಮಿ ಅವರು ಇಲ್ಲ ಅಂದಿದ್ರೆ ಸ್ಮಾರಕಕ್ಕೆ ಜಾಗ ಸಿಗುತ್ತಿರಲಿಲ್ಲ. ಕೆಎಸ್ಆರ್ಟಿಸಿ ಜಾಗ ಕೊಡಲು ನಾನು ನಿರ್ಧಾರ ಮಾಡಿದ್ದೆ. ಆದ್ರೆ ಆ ಜಾಗ ಬೇಡಾ ಅಂದರು. ಆ ನಂತರ ಕುಮಾರಸ್ವಾಮಿ ಅವರು ಜಾಗ ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಉಭಯ ನಾಯಕರುಗಳಿಗೆ ಸಲಹೆ ನೀಡಿದ ತಮ್ಮಣ್ಣ, ಟೀಕೆಗಳು ಆರೋಗ್ಯಕರವಾಗಿ ಇರಬೇಕು. ಟೀಕೆ ಅಶ್ಲೀಲವಾಗ ಬಾರದು. ನಮ್ಮ ತಪ್ಪು ಕಾಣಬೇಕು ಅಂದ್ರೆ ಟೀಕಾಕಾರರು ಇರಬೇಕು. ಇಬ್ಬರು ನಾಯಕರು ಆರೋಗ್ಯಕರವಾಗಿ ಚರ್ಚೆ ಮಾಡಬೇಕು. ಅಶ್ಲೀಲವಾಗಿ ಟೀಕೆಗಳನ್ನು ಮಾಡಬಾರದು ಎಂದು ಮನವಿ ಮಾಡಿಕೊಂಡರು.