`ಕೆಲ್ಸ ಮಾಡಿಲ್ಲ ಅಂದ್ರೆ ಸ್ವೇ ತರುವ ಅವಶ್ಯಕತೆ ಏನಿತ್ತು’: ಹೆಚ್.ಡಿ.ಕುಮಾರಸ್ವಾಮಿ

1 min read
H D kumaraswamy

`ಕೆಲ್ಸ ಮಾಡಿಲ್ಲ ಅಂದ್ರೆ ಸ್ವೇ ತರುವ ಅವಶ್ಯಕತೆ ಏನಿತ್ತು’: ಹೆಚ್.ಡಿ.ಕುಮಾರಸ್ವಾಮಿ

ಕಲಬುರಗಿ : ನೀವು ಆ ಕೆಲಸ ಮಾಡಿಲ್ಲ ಅಂದ ಮೇಲೆ ಕೋರ್ಟ್ ಗೆ ಹೋಗಿ ಸ್ಟೇ ತರುವ ಅವಶ್ಯಕತೆ ಏನಿತ್ತು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಸುಧಾಕರ್ ಏಕಪತ್ನಿವ್ರತಸ್ಥ ಹೇಳಿಕೆಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಏಕಪತ್ನಿ ವ್ರತಸ್ಥ ಎಂದು ಹೇಳಿಕೊಂಡು ಹಿಂದೆ ಏನೆಲ್ಲಾ ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದ ವಿಷಯ.

ಏಕಪತ್ನಿತ್ವ ವಿಷಯ ಕುರಿತು ಹೇಳಿಕೆ ಸಚಿವರಿಗೆ ಮಾನ ಮರ್ಯಾದೆ ಇದೆಯಾ..? ನೀವು ಆ ಕೆಲಸ ಮಾಡಿಲ್ಲ ಎಂದ ಮೇಲೆ ಕೋರ್ಟ್ ನಿಂದ ಸ್ಟೇ ತರುವ ಅವಶ್ಯಕತೆ ಏನಿತ್ತು ಪ್ರಶ್ನಿಸಿದರು.

H D Kumaraswamy

ಇನ್ನು ಸಿಡಿ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ಈ ವಿಚಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪವಾಗಿದೆ. ಕಲಾಪಗಳಿಗೆ ಇತಿಶ್ರೀ ಹಾಡಿ ಮೊಟಕುಗೊಳಿಸಿದ್ದು ದುರಂತ.

ರಾಜ್ಯದ ಜನರ ಭಾವನೆಗಳಿಗೆ, ಸಮಸ್ಯೆಗಳಿಗೆ ಎರಡು ರಾಷ್ಟ್ರೀಯ ಪಕ್ಷಗಳು ಧಕ್ಕೆಯನ್ನುಂಟು ಮಾಡುತ್ತಿವೆ. ಕಲಾಪದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಬಳಸುತ್ತಿರುವ ಪದಗಳು ಖಂಡನೀಯವಾದದ್ದು.

ರಾಜ್ಯದ ಜನರನ್ನು ಎರಡು ಪಕ್ಷಗಳು ಬೆತ್ತಲೆಗೊಳಿಸುತ್ತಿವೆ. ನಾವು ಹೊಡೆದಂಗೆ ಮಾಡ್ತಿವಿ, ನೀವು ಅತ್ತಂಗೆ ಮಾಡಿ ಅಂತಾ ಕಾಂಗ್ರೆಸ್-ಬಿಜೆಪಿ ಮಧ್ಯೆ ಒಳ ಒಪ್ಪಂದ ಆದಂತಿದೆ ಎಂದು ಗಂಭೀರ ಆರೋಪ ಮಾಡಿದರು.

chinthamani
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd