DKC – HDK | ಡಿಕೆಶಿಯನ್ನ ಕಂಡರೇ ನಂಗ್ಯಾಕೆ ಸಿಂಪಥಿ : ಹೆಚ್ಡಿಕೆ ಪ್ರಶ್ನೆ
ಮೈಸೂರು : ಡಿ.ಕೆ.ಶಿವಕುಮಾರ್ ಅವರನ್ನ ಕಂಡ್ರೆ ನನಗೆ ಯಾಕೆ ಸಿಂಪಥಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೆಂಪೇಗೌಡ ಜಯಂತಿಯಂದು ಡಿ.ಕೆ.ಶಿವಕುಮಾರ್ ಸಿಎಂ ಆಗುವುದಾದ್ರೆ ನನ್ನ ಬೆಂಬಲ ಇರುತ್ತದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು. ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಮುಖಂಡರನ್ನು ಆಹ್ವಾನಿಸುತ್ತಾರೆ. ನನ್ನನ್ನೂ ಕರೆಯುತ್ತಾರೆ, ಶಿವಕುಮಾರ್ ಅವರನ್ನೂ ಕರೆಯುತ್ತಾರೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಇದ್ದೇವೆ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಅವರು ಒಂದು ಪಕ್ಷದ ಅಧ್ಯಕ್ಷರು, ನಾನು ಒಂದು ಪಕ್ಷದ ಮುಖಂಡ. ಸಿಎಂ ಆಗೋಕೆ ಚಾಮುಂಡೇಶ್ವರಿ ದಯೆ, ಭಗವಂತನ ಆಶೀರ್ವಾದಬೇಕು. ಕಳೆದ ಬಾರಿ ನಾವು ಗೆದ್ದದ್ದು 37 ಶಾಸಕರು ಮಾತ್ರ, ಆದರೂ ನಾನು ಸಿಎಂ ಆಗಲಿಲ್ಲವೇ ಎಂದು ಹೇಳಿದರು.
ಇನ್ನು ಭ್ರಷ್ಟಾಚಾರದ ಬಗ್ಗೆ ಮಾತನಾಡಿ, ಕಿರುಕುಳ ನೀಡಿ ಕಮಿಷನ್ ವಸೂಲಿ ಮಾಡಲಾಗುತ್ತಿದೆ. ಆ ಸರ್ಕಾರ, ಈ ಸರ್ಕಾರ ಅಂತ ಇಲ್ಲ. ಬಿಜೆಪಿ ಸರ್ಕಾರ 2008ರಲ್ಲಿ ಬಂತೋ ಆಗ ಆಪರೇಷನ್ ಕಮಲ ಮಾಡಿದ್ದೀರಿ. ಹಣದ ಮೂಲಕ ಏನು ಬೇಕಾದರೂ ಪಡೆದುಕೊಳ್ಳುತ್ತೇವೆ ಎಂದುಕೊಂಡಿದ್ದಾರೆ. ನಿಜವಾಗಲೂ ದೇಶ ಕಾಯುವವರಾಗಿದ್ದರೆ ಆತ್ಮಸಾಕ್ಷಿಗೆ ಉತ್ತರಕೊಡಿ. ಪರ್ಸೆಂಟೇಜ್ ಸ್ವಾತಂತ್ರ್ಯ ಪೂರ್ವದಲ್ಲೂ ಇತ್ತು. ಬ್ರಿಟೀಷರ ಕಾಲದಲ್ಲೂ ಇತ್ತು. ಸ್ವಾತಂತ್ರ್ಯ ಬಂದ ನಂತರ ಕಮಿಷನ್ ಪ್ರಾರಂಭವಾಯಿತು.
ಕೇಂದ್ರದಿಂದ ರಾಜ್ಯದವರೆಗೆ ಸಣ್ಣ ಪ್ರಮಾಣದಲ್ಲಿ ಇತ್ತು. ಅವತ್ತಿನ ಪರಿಸ್ಥಿತಿಯಲ್ಲಿ ಶಾಸಕರ ಮಟ್ಟದಲ್ಲಿ ಇರಲಿಲ್ಲ. ಸರ್ಕಾರದ ಮಟ್ಟದಲ್ಲಿ ಫಂಡ್ ರೈಸಿಂಗ್ ಗೆ ಅಂತ ಇಟ್ಟುಕೊಂಡಿದ್ದರು. ಕೆಲ ಸರ್ಕಾರಗಳು ಅಬಕಾರಿ ಶುಲ್ಕದ ಮೂಲಕ, ಎಜುಕೇಷನ್ ಲಾಭಿ ಶುರುವಾಯಿತು. ಗುತ್ತಿಗೆದಾರರು ಶೇ.2-3 ರಷ್ಟು ಇತ್ತು. ಶೇ.40ರಷ್ಟು ಪರ್ಸಂಟೇಜ್ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯ ಕೆಟ್ಟ ರೀತಿಯಲ್ಲೇ ಇದೆ. ಗುತ್ತಿಗೆದಾರರ ಸಂಘದವರೂ ಆರೋಪ ಮಾಡಿದ್ದಾರೆ. ಶೇ.40 ಸಾರ್ವಜನಿಕವಾಗಿಯೂ ಚರ್ಚೆ ನಡೆಯುತ್ತಿದೆ. ಶಾಸಕರೇ ಕ್ರಷರ್ ಹಾಕಿಕೊಳ್ಳುವುದು, ಮರಳು ದಂಧೆ ಮಾಡುವುದು ನಡೆಯುತ್ತಿದೆ. ಇದು ಸ್ವೇಚ್ಛಾಚಾರದ ರೀತಿಯಲ್ಲಿ ನಡೆಯುತ್ತಿರುವುದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಂದು ಆರೋಪಿಸಿದರು.