2023ಕ್ಕೆ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರಕ್ಕೆ ಬರ್ತೀವಿ : ಕುಮಾರಸ್ವಾಮಿ
ಬೆಂಗಳೂರು : 2023ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ ಗೆದ್ದು ಅಧಿಕಾರಕ್ಕೆ ಬರ್ತೀವಿ ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎನ್ ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ ಪಕ್ಷವನ್ನ ವಿಲೀನ ಮಾಡಲ್ಲ, ಹೊಂದಾಣಿಕೆ ಚುನಾವಣೆನೂ ಮಾಡಿಕೊಳ್ಳಲ್ಲ. 2023ಕ್ಕೆ ಜೆಡಿಎಸ್ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೆ.
ಪಕ್ಷವನ್ನ ಬೂತ್ ಮಟ್ಟದಲ್ಲಿ ಸಂಘಟನೆ ಮಾಡ್ತೀವಿ. ಸ್ವತಂತ್ರವಾಗಿ ಅಧಿಕಾರ ಕೊಟ್ರೆ ಏನ್ ಕೆಲಸ ಮಾಡ್ತೀನಿ ಅಂತ ಜನರಿಗೆ ಹೇಳ್ತೀನಿ ಎಂದು ಹೇಳಿದರು.
ಇದೇ ವೇಳೆ 2023 ಜನತಾದಳದ ರಾಜ್ಯವಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಪಾಪಾದ ಹಣದಲ್ಲಿ ಗ್ರಾಮ ಸ್ವರಾಜ್ ಗೆ ಹಣ ಚೆಲ್ಲಿದ್ದಾರೆ.
ಯಾವ ಜನರ ಸೇವೆ ಈ ಸರ್ಕಾರ ಮಾಡಿದೆ..? ಕಾರ್ಮಿಕ ಇಲಾಖೆ ಹಣ ಏನ್ ಮಾಡಿದ್ರು ಎಂದು ಪ್ರಶ್ನಿಸಿದರು.
ನಮ್ಮ ಕಾರ್ಯಕರ್ತರ ಸ್ವಾಭಿಮಾನ ಅಡ ಇಡಲು ಸಾಧ್ಯವಿಲ್ಲ. 2023ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ಪುನರುಚ್ಚರಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









