ಆನೆ ಹೋಗ್ತಿದ್ರೆ, ನಾಯಿ ಬೊಗಳುತ್ತವೆ : ಜಮೀರ್ ವಿರುದ್ಧ ಹೆಚ್ ಡಿಕೆ ಕಿಡಿ H D Kumaraswamy saaksha tv
ಮೈಸೂರು : ಆನೆ ಹೋಗ್ತಿದ್ರೆ, ನಾಯಿ ಬೊಗಳುತ್ತವೆ. ಅವರಿಗೆಲ್ಲಾ ತಲೆ ಕೆಡಿಸಿಕೊಳ್ಳೋಕೆ ಆಗುತ್ತಾ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಂದಗಿಯಲ್ಲಿ ಜಮೀರ್ ಇಂದು ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿ ವಿರುದ್ಧ ಸೂಟ್ ಕೇಸ್ ಆರೋಪ ಮಾಡಿದರು. ಈ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ಈ ಹಿಂದೆ ನಾನು ಬಿಬಿಎಂಪಿಯ ನಾಲ್ಕು ವಾರ್ಡ್ ಗಳಲ್ಲಿ ಟ್ರ್ಯಾಕ್ಟರ್ ಮೂಲಕ ಕಸ ಸಂಗ್ರಹಿಸುವ ಗುತ್ತಿಗೆ ಕೆಲಸಗಾರನಾಗಿದ್ದೆ. ಅದರಿಂದ ಬಂದ ಹಣದಿಂದ ವ್ಯಾಸಂಗ ಮಾಡುತ್ತಿದ್ದೆ. ಅಂದಿನ ವಿಪಕ್ಷ ನಾಯಕ ನಾಗೇಗೌಡರು ಈ ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ರು. ನಮ್ಮ ತಂದೆ ಕೂಡಲೇ ಬೈದು ಕಸ ಸಂಗ್ರಹ ಗುತ್ತಿಗೆ ಮಾಡದಂತೆ ಹೇಳಿದ್ರು. ಬಳಿಕ ಮೈಸೂರಿಗೆ ಬಂದು ಚಿತ್ರ ವಿತರಕನಾಗಿ ಕೆಲಸ ಆರಂಭಿಸಿದೆ. ಅಂದು ನಾನು ಹಣಗಳಿಸಬಹುದಾಗಿದ್ರೆ, ಎಷ್ಟು ಗಳಿಸಬಹುದಿತ್ತು. ಅದೆಲ್ಲಾ ಬಿಡಿ, ನಾನು ಅವರ ಮಾತಿಗೆ ಉತ್ತರ ಕೊಡಲು ಜಮೀರ್ ಅಹ್ಮದ್ ಅನ್ ಫಿಟ್ ಎಂದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಕ್ಷ ಅಂತಾರೆ. ಹಾಗಿದ್ರೆ ವರುಣಾದಲ್ಲಿ ಸಿದ್ದರಾಮಯ್ಯ ಫ್ಯಾಮಿಲಿನಾ ಎಂದು ಟಾಂಗ್ ನೀಡಿದರು. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಮಗ ಬಿಟ್ಟರೆ, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವೇ ಎಂದು ಪ್ರಶ್ನಿಸಿದರು.
ಇದೇ ವೇಳೆ ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಪರಿಣಾಮ ನಮ್ಮ ಪಕ್ಷ ನೆಲ ಕಚ್ಚುವಂತಾಯಿತು ಎಂದು ದೂರಿದ ಹೆಚ್ ಡಿಕೆ, ಜೆಡಿಎಸ್ ಮುಳುಗಿಸುತ್ತೇನೆ ಎಂದು ಹೊರಟವರ ಸ್ಥಿತಿ ಇಂದು ಏನಾಗಿದೆ ಅಂತಾ ಇತಿಹಾಸ ಹೇಳುತ್ತೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.