ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಇಷ್ಟು ದಿನ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (dk shivakumar) ಅವರು ಸಿದ್ದರಾಮಯ್ಯ ಅವರಿಗೆ ಜೈ ಜೋಡಿಸ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy ) ಅವರು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ(H.D.Kumaraswamy ), ರಾಜರಾಜೇಶ್ವರಿ ನಗರ ಉಪಚುನಾವಣೆ ಮೂಲಕ ಜೆಡಿಎಸ್ ಪಕ್ಷದ ಸಮಾಧಿ ಅಂತ ನಮ್ಮ ಪಕ್ಷದ ಮುಖಂಡರ ಮನೆಯಲ್ಲಿ ಡಿಕೆಶಿ (dk shivakumar) ಹೇಳಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ಕಸದ ಮಾಫಿಯಾ ವಿರುದ್ಧ ಆಮ್ ಆದ್ಮಿ ಪಕ್ಷ ಪ್ರತಿಭಟನೆ
ಇಷ್ಟು ದಿನ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಡಿಕೆಶಿ ಯವರು ಅವರಿಗೆ ಕೈ ಜೋಡಿಸ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ನಮ್ಮ ಪಕ್ಷದ ಕೆಲ ಮುಖಂಡರನ್ನು ಸೆಳೆಯಲು ಡಿಕೆಶಿ ಪ್ರಯತ್ನ ಮಾಡುತ್ತಿದ್ದಾರೆ.
ನನ್ನ ಪಕ್ಷದ ಮುಖಂಡರನ್ನು ಅವರು ಸೆಳೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಇನ್ನು ಈಗಿನ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧವೇ ನನ್ನ ರಾಜಕೀಯ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ಒಬ್ಬ ಪಕ್ಷದ ಅಧ್ಯಕ್ಷರಾಗಿ ಬೇರೆ ಪಕ್ಷದದಲ್ಲಿರುವ ಒಂದು ಸಮಾಜದವರನ್ನು ಕರೆದುಕೊಂಡು ಹೋಗೋದು ಅವರ ಭ್ರಮೆ.
ಮೊದಲು ಡಿಕೆಶಿ ಯವರು ಸಮಾಜಕ್ಕೆ ಕೊಡುಗೆ ಹಾಗೂ ಕಾಣಿಕೆ ಏನೆಂದು ಹೇಳಬೇಕು. ಅವರು ಕರೆದ ಕೂಡಲೇ ನಮ್ಮವರು ಅವರ ಹಿಂದೆ ಹೋಗೋಕೆ ಅವರೇನು ಕಿಂದರಿ ಜೋಗಿಗಳಾ…?
ಇದನ್ನೂ ಓದಿ : ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ, ಬಿಜೆಪಿ ಗೆಲುವು ಭ್ರಮೆ : ಹೆಚ್ ಡಿಕೆ
ಅವರಿಂದ ನನಗೆ ಯಾವುದೇ ಆತಂಕ ಇಲ್ಲ. ಈ ಚುನಾವಣೆಯಲ್ಲಿ ಅವರಿಗೆ ಮತದಾರರ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel