ರಾಜ್ಯದಲ್ಲಿರೋದು ಬಿಎಸ್‍ವೈ ಕುಟುಂಬದ ಸರ್ಕಾರ : ಹೆಚ್. ಪಿ.ಮಂಜುನಾಥ್
ಹುಣಸೂರು : ರಾಜ್ಯದಲ್ಲಿರೋದು ಬಿಎಸ್‍ವೈ ಕುಟುಂಬದ ಸರ್ಕಾರ ಎಂದು ಹುಣಸೂರು ಶಾಸಕ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.
ಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಮಂಜುನಾಥ್, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಸರ್ಕಾರ ನಡೆಯುತ್ತಿದೆ.
ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿದ್ದರೂ ಹಣಸೂರಿಗೆ ಅವರ ಕೊಡುಗೆ ಶೂನ್ಯ. ನನ್ನ ವಿರುದ್ಧ ಸೋತವರನ್ನ ಎಂಎಲ್‍ಸಿ, ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರೂ ಏನೂ ಕೆಲಸ ಮಾಡಿಲ್ಲ.
ಇನ್ನ ಚುನಾವಣಾ ಉಸ್ತುವಾರಿ ಹೊತ್ತಿದ್ದ ಸಿ.ಪಿ.ಯೋಗೇಶ್ವರ್ ಮಂತ್ರಿಯಾದರೂ ನಯಾ ಪೈಸೆ ಹಣ ಇಲ್ಲ. ಸಿಎಂ ದೃತರಾಷ್ಟ್ರ ಪ್ರೇಮದ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಮುಖ್ಯಮಂತ್ರಿಗಳು ನಮಗೆ ವಿಶೇಷ ಅನುಧಾನ ಬಿಡುಗಡೆ ಮಾಡೋದು ಬೇಡ. ಹಿಂದಿನ ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಕೊಡಿ ಸಾಕು.
ವರುಣಾಗೆ ಕೊಟ್ಟಿರುವ ಅನುದಾನ ಸಿಎಂ ಪುತ್ರ ಹೇಳಿದವರಿಗೆ ಕೊಟ್ಟಿದ್ದಾರೆ. ನಾನು ಲಕ್ಷ್ಮಣ ತೀರ್ಥ ನದಿ ನೀರು ಸಂಗ್ರಹ ಮಾಡುವ ಕಟ್ಟೆಮಳಲವಾಡಿ ಕೆರೆ ಅಭಿವೃದ್ಧಿಗೆ ಅನುದಾನ ಕೇಳಿದ್ರೆ ಕೊಟ್ಟಿಲ್ಲ.
ಆದರೆ ಸಿಎಂ ತಂಗಿ ಮಗ ಅಶೋಕ್ ಫಾರಂಹೌಸ್‍ಗೆ ಹೋಗುವ ರಸ್ತೆಗೆ ಕೋಟ್ಯಾಂತರ ರೂ ಅನುದಾನ ನೀಡಿದ್ದಾರೆ.
3 ಕೋಟಿ ಅನುಧಾನ ಕೊಟ್ಟು ರಸ್ತೆ ಮಾಡಲಾಗುತ್ತಿದೆ. ಅಲ್ಲಿ ಮಗ, ಬೀಗರು, ಇಲ್ಲಿ ತಂಗಿ ಮಗ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿದರು.










