ಸಿದ್ದರಾಮಯ್ಯರನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ : ಹೆಚ್ ವಿಶ್ವನಾಥ್
ಸಿದ್ದರಾಮಯ್ಯರನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ ಎಂದು ಮೈಸೂರಿನಲ್ಲಿ ಹೆಚ್ ವಿಶ್ವನಾಥ್ ಹೇಳಿದ್ದಾರೆ. ದೇವೇಗೌಡರು ನಿಮ್ಮನ್ನ ಪಕ್ಷದಿಂದ ಹೊರ ಹಾಕಿದ್ದರು. ನಾನು ಸಾಕಷ್ಟು ಜನರ ಕಾಲು ಹಿಡಿದು ಕಾಂಗ್ರೆಸ್ ಪಕ್ಷಕ್ಕೆ ನಿಮ್ಮನ್ನ ಕರೆದುಕೊಂಡು ಬಂದೆ. ನಿಮ್ಮನ್ನು ಉದ್ಧಾರ ಮಾಡಲು ಹೋಗಿ ನಾನು ಹಾಳಾದೆ ಎಂದು ಕಿಡಿಕಾರಿದ್ದಾರೆ.
ಹಿಂದೂಗಳೆಲ್ಲ ಖಡ್ಗ ಕದ್ದು ಮುಚ್ಚಿಡಬೇಡಿ , ಮನೆಯಲ್ಲಿ ನೇತು ಹಾಕಿ – ಪ್ರಮೋದ್ ಮುತಾಲಿಕ್..!
ಇದೇ ವೇಳೆ ಸಿದ್ದರಾಮಯ್ಯನವರ ಅವಧಿಯಲ್ಲೇ ಕುರುಬ ಜನಾಂಗಕ್ಕೆ ಹೆಚ್ಚು ಅನ್ನಯ ಆಗಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೇ ಸಂಗೊಳ್ಳಿ ರಾಯಣ ಅಭಿವೃದ್ಧಿಗೆ 260 ಕೋಟಿ ಹಣ ಬಿಡುಗಡೆ ವಿಚಾರವಾಗಿ ಮಾತನಾಡಿ ಸಿದ್ದರಾಮಯ್ಯ ಕೊಟ್ಟಿದ್ದು ಕೇವಲ 10ಕೋಟಿ ಮಾತ್ರ ಕೇವಲ ಬಜೆಟ್ನಲ್ಲಿ ಹೇಳಿ ಹೋದರೆ ಆಗಲ್ಲ, ಮೇಲಾಗಿ ಅದಕ್ಕಾಗಿ ಹಣವನ್ನು ಮೀಸಲಿಡಬೇಕಿತ್ತು. ಎಫ್ಡಿ ಹಣ ಮೀಸಲಿಟ್ಟು ಮಾತನಾಡಬೇಕಿತ್ತು. ಅದು ಬಿಟ್ಟು ನಾನೇ ಜನಾಂಗವನ್ನು ಉದ್ದಾರ ಮಾಡಿದೆ ಎನ್ನುವುದು ಸರಿಯಲ್ಲ. ನೀವೇನು ದೇವರಾಜ ಅರಸು, ಹಂನುಂತಯ್ಯರಿಗಿಂತ ದೊಡ್ಡ ನಾಯಕ ಅಲ್ಲ. ಅವರ ಅವಧಿಯಲ್ಲಿ ಆದ ಅಭಿವೃದ್ಧಿಗಳು ದೊಡ್ಡವು ಎಂದಿದ್ದಾರೆ.
ಅಷ್ಟೇ ಅಲ್ಲ ನಿಮ್ಮ ದರ್ಪ ನಿಮ್ಮನ್ನ ಎಲ್ಲಿಗೆ ತಗೊಂಡು ಹೋಗಿದೆ. ನಾನೇ ಮುಖ್ಯಮಂತ್ರಿ ನಾನೇ ಆಗ್ತೀನಿ ಅಂತಾರೇ. ಇನ್ನೂ 2.5. ವರ್ಷ ಇದೆ, ಜನರು ಯಾರಿಗೆ ಆಶಿರ್ವಾದ ಮಾಡ್ತಾರೆ ಯಾರಿಗೆ ಗೊತ್ತು. ಸುಮ್ಮನೆ ಯಾಕೆ ಬೊಂಬಡಿ ಬಿಡ್ತೀರಿ ಎಂದು ಕಿಡಿಕಾರಿದ್ದಾರೆ.