ಹಿಂದೂಗಳೆಲ್ಲ ಖಡ್ಗ ಕದ್ದು ಮುಚ್ಚಿಡಬೇಡಿ , ಮನೆಯಲ್ಲಿ ನೇತು ಹಾಕಿ – ಪ್ರಮೋದ್ ಮುತಾಲಿಕ್..!

1 min read

ಹಿಂದೂಗಳೆಲ್ಲ ಖಡ್ಗ ಕದ್ದು ಮುಚ್ಚಿಡಬೇಡಿ , ಮನೆಯಲ್ಲಿ ನೇತು ಹಾಕಿ – ಪ್ರಮೋದ್ ಮುತಾಲಿಕ್..!

ಹಿಂದೂಗಳಾದವರೆಲ್ಲರೂ ಆಯುಧಗಳನ್ನು ಮನೆಯಲ್ಲಿ ಎಲ್ಲರಿಗೂ ಕಾಣುವಂತೆ ನೇತಾಡುವಂತೆ ಹಾಕಿ  ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್.

ಗದಗ ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಮಹಾರಾಜರ ಜಯಂತಿ ಸಮಾವೇಶದಲ್ಲಿ ಮಾತನಾಡುವ ವೇಳೆ ಈ ರೀತಿಯಾದ ಹೇಳಿ ನೀಡಿದ್ದಾರೆ.

ರಾಜ್ಯ ಸರ್ಕಾರದ ಬಜೆಟ್  ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ, ಅವರ ಬಳಿ ಹಣವೇ ಇಲ್ಲ : ಸಿದ್ದರಾಮಯ್ಯ

ಹೌದು ಭಾಷಣದ ವೇಳೆ ಶಿವಾಜಿ ಮಹಾರಾಜರ ಫೋಟೋ, ಚರಿತ್ರೆ ಪುಸ್ತಕ, ಖಡ್ಗ ಹಿಂದೂಗಳೆಲ್ಲರೂ ಮನೆಯಲ್ಲೂ ಇಟ್ಟುಕೊಳ್ಳಿ. ಖಡ್ಗ ಕದ್ದುಮುಚ್ಚಿ ಇಡಬೇಡಿ, ಮನೆಯೊಳಗೆ ಹೋಗುತ್ತಿದ್ದಂತೆ ಕಾಣುವಂತಿಡಿ. ಹರಿತವಾದ ಖತ್ತಿ, ಖಡ್ಗ, ಭಾಚಿ, ಭರ್ಚಿ, ಕುಡಗೋಲು, ಚಾಕು ಮನೆಯಲ್ಲಿ ನೇತು ಹಾಕಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಪಿಎಫ್ ಐ ಸಂಘಟನೆಗೆ ಸಿದ್ದರಾಮಯ್ಯ ಪರೋಕ್ಷ ಬೆಂಬಲ : ಈಶ್ವರಪ್ಪ ಆರೋಪ

ಇನ್ನೂ ಆಯುಧ ಪೂಜೆ ನಮ್ಮ ಸಂಸ್ಕೃತಿ. ಈ ಹಬ್ಬಕ್ಕೆ ಅವಮಾನ ಮಾಡಬೇಡಿ. ಹೇಡಿಗಳಾಗಬೇಡಿ, ದುರ್ಗಾ ಮಾತಾಳ 10 ಕೈನಲ್ಲಿ 10 ಶಸ್ತ್ರಗಳಿವೆ. ದುಷ್ಟ, ನೀಚ, ಭ್ರಷ್ಟ, ಭಯೋತ್ಪಾದಕ, ಗೋ ಹಂತಕ, ಮತಾಂಧರನ್ನು ಕತ್ತರಿಸಲೆಂದೇ ದೇವಿ ಕೈನಲ್ಲಿ ಶಸ್ತ್ರಗಳಿವೆ. ಕುಡಿದು ಹೊಡೆದಾಡಲು ಉಪಯೋಗಿಸಬೇಡಿ. ಬದಲಾಗಿ ದೇಶದ, ಗೋ ಮಾತೆ ಹಿತಕ್ಕೋಸ್ಕರ ಇಂದಲ್ಲಾ ನಾಳೆ ಬರುವ ಬೀದಿ ಕಾಳಗಕ್ಕೆ ಖಡ್ಗ ಹೊರ ತೆಗೆಯಿರಿ ಎಂದಿದ್ದಾರೆ.

ಮೀಸಲಾತಿಯ ಹೋರಾಟವನ್ನು ಬಿಎಸ್ ವೈ ಹಾಗೂ ಪಕ್ಷ ವಿರೋಧಿಸಿಲ್ಲ – ಬಿ ವೈ ವಿಜಯೇಂದ್ರ

ಬೆಂಗಳೂರಿನಲ್ಲಿ ಶ್ರೀರಾಮ‌ ನಿಧಿ ಸಂಗ್ರಹಣೆ ವೇಳೆ ಮುಸ್ಲಿಮರು ಬಂದು ರಥಯಾತ್ರೆ ತಡೀತಾರೆ. ಮುಸ್ಲಿಂ ಗೂಂಡಾಗಳು ಹಿಂದೂ ಕಾರ್ಯಕರ್ತರಿಗೆ ಹೊಡೆದು ಗಾಯಮಾಡಿ ರಾಮನ ಭಾವಚಿತ್ರ ಹರಿದು ಹಾಕಿ ಗಲಭೆ ಕೂಡಾ ಮಾಡ್ತಾರೆ ಎಂದು ಕೋಮುಗಲಭೆಗೆ ಪ್ರಚೋದನಾಕಾರಿ ರೀತಿಯಲ್ಲಿ ಭಾಷಣ ಮಾಡಿ  ವಿವಾದಕ್ಕೆ ಗುರಿಯಾಗಿದ್ದಾರೆ.

ನೈಟ್ ಕರ್ಫ್ಯೂ ಮರುಜಾರಿಗೊಳಿಸುವ ಯಾವುದೇ ಚಿಂತನೆ ಇಲ್ಲ : ಕೆ. ಸುಧಾಕರ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd