ಹಾಲಿ ಸಚಿವರ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ವಿಶ್ವನಾಥ್
ಬೆಂಗಳೂರು : ಉಪಚುನಾವಣೆ ಫಲಿತಾಂಶ ಬೆನ್ನಲ್ಲೇ ಸಂಪುಟ ವಿಸ್ತರಣೆ ಸರ್ಕಸ್ ತೀವ್ರಗೊಂಡಿದ್ದು, ಸಚಿವಾಕಾಂಕ್ಷಿಗಳು ಮಂತ್ರಿಗಿರಿಗಾಗಿ ಭಾರಿ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
ದೀಪಾವಳಿ ಬಳಿಕ ಸಂಪುಟ ವಿಸ್ತರಣೆ ಆಗಲಿದ್ದು, ಸಚಿವಾಕಾಂಕ್ಷಿಗಳು ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ಈ ಮಧ್ಯೆ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹಾಲಿ ಸಚಿವರ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಗೆ ಹೋಗಬೇಕೆಂದರೆ ಹೊಸ ಮುಖಗಳು ಬೇಕು.
ಹೀಗಾಗಿ ಹೊಸ ಸಚಿವರಿಗೆ ಅವಕಾಶ ನೀಡಲು ಸಚಿವ ಸಂಪುಟವನ್ನು ಪುನರ್ ರಚನೆ ಮಾಡಬೇಕು.
ಮಂತ್ರಿಗಿರಿಗಾಗಿ ಸಾಹುಕಾರ್ ಗೆ ಕೈ ಮುಗಿದ ಬಿಜೆಪಿಗರು
ಹಾಲಿ ಸಚಿವರನ್ನಿಟ್ಟುಕೊಂಡು ಹೋದರೆ ಮುಂದಿನ ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ ಎಂದು ಹೇಳುವ ಮೂಲಕ ಹಾಲಿ ಸಚಿವರಿಗೆ ಎಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಉಪಚುನಾವಣೆ ಫಲಿತಾಂಶ ನಮ್ಮ ಪರ ಬಂದಿರಬಹುದು. ಉಪಚುನಾವಣೆ ಸಹಜವಾಗಿ ಸರ್ಕಾರದ ಪರವಾಗಿ ಬರುತ್ತದೆ.
ಉಪಚುನಾವಣೆಗಳನ್ನು ಸರ್ಕಾರಗಳು ನಡೆಸುತ್ತವೆ. ಆದರೆ ಸಾರ್ವತ್ರಿಕ ಚುನಾವಣೆ ಪಕ್ಷ ನಡೆಸುತ್ತದೆ.
ಹೀಗಾಗಿ ಹೊಸ ಮುಖಗಳು ಸಂಪುಟದೊಂದಿಗೆ ಹೋಗಬೇಕು. ಸಾರ್ವತ್ರಿಕ ಚುನಾವಣೆ ಗೆಲ್ಲಬೇಕಾದರೆ ಸಂಪುಟ ಪುನರ್ ರಚನೆಯಾಗಬೇಕಾಗುತ್ತದೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಇನ್ನು ದೆಹಲಿ ಭೇಟಿ ಬಗ್ಗೆ ಮಾತನಾಡಿ, ನಾನು ದೆಹಲಿಗೆ ಹೋಗಿರಲಿಲ್ಲ, ಉಜ್ಜೈನಿಗೆ ಹೋಗಿದ್ದೆ.
ದೆಹಲಿಯಿಂದ ಕೋಲ್ಕತ್ತಾಗೆ ಹೋಗಿದ್ದೆ. ದೆಹಲಿ ಮಾರ್ಗದಲ್ಲಿ ಮಹಾಕಾಳಿ ದರ್ಶನಕ್ಕೆ ಹೋಗಿದ್ದೆ.
ಮಹಾಕಾಳಿಗೆ ನನಗೆ ಒಳ್ಳೆಯದು ಮಾಡುವಂತೆ ಕೇಳಿಕೊಂಡಿದ್ದೇನೆ. ದೇವರಲ್ಲಿ ಬೇಡಿಕೊಳ್ಳೋದು ದೇಶಕ್ಕೆ ಒಳ್ಳೆಯದು ಮಾಡಲಿ ಅಂತ.
ನಾವು ರಾಜಕಾರಣಿಗಳು ನಮಗೂ ಒಳ್ಳೆಯದು ಮಾಡು ಎಂದು ಸ್ವಾರ್ಥಕ್ಕೂ ಬೇಡಿಕೊಳ್ಳುತ್ತೇವೆ. ನಾನು ಸಚಿವನಾಗುವ ವಿಶ್ವಾಸ ಇದೆ. ನನ್ನ ಹಿರಿತನ, ತ್ಯಾಗಕ್ಕೆ ಬೆಲೆ ಸಿಗುತ್ತೆ ಎಂದು ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel