ಪ್ರೈವೇಟ್ ಹಾಸ್ಪಿಟಲ್ ಮೇಕಿಂಗ್ ಮನಿ : ಸರ್ಕಾರದ ವಿರುದ್ಧ ವಿಶ್ವನಾಥ್ ಗರಂ
ಮೈಸೂರು : ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 35 ಸಾವಿರ ರೂ. ಬಿಲ್ ಮಾಡುತ್ತಿದ್ದಾರೆ. ಪ್ರೈವೇಟ್ ಹಾಸ್ಪಿಟಲ್ ಮೇಕಿಂಗ್ ಮನಿ. ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಯಾರು ಹಾಕ್ತಾರೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಆಡಳಿತದಲ್ಲಿ ಭದ್ರತೆ ಇಲ್ಲ. ಸದ್ಯಕ್ಕೆ ಅಯೋಗ್ಯ ಪರಿಸ್ಥಿತಿ ಬಂದಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮಗೆ ಹತ್ತು ರೂಪಾಯಿ ಬಿಡುಗಡೆ ಆಗಬೇಕು ಅಂದ್ರೂ ಯಡಿಯೂರಪ್ಪ ಹತ್ರ ಹೋಗ್ಬೇಕು. ಆದ್ರೆ ಯಡಿಯೂರಪ್ಪ ಹಣ ಬಿಡುಗಡೆ ಮಾಡ್ತಿಲ್ಲ. ಆರೋಗ್ಯ ಸಚಿವರು 2,500 ವೈದರ ನೇಮಕಕ್ಕೆ ಘೋಷಣೆ ಮಾಡಿ ಸುಮಾರು ಒಂದು ತಿಂಗಳು ಆಯ್ತು. ಪ್ರತಿಯೊಂದಕ್ಕೂ ಫೈನಾನ್ಸ್ ಕ್ಲಿಯರೆನ್ಸ್ ಬೇಕು, ಸಿಎಂ ಯಡಿಯೂರಪ್ಪ ಫೈನಾನ್ಸ್ ಮಿನಿಸ್ಟರ್ ಇರೋದರಿಂದ ಎಲ್ಲಾ ಅವರ ಹತ್ತಿರ ಹೋಗಬೇಕು. ಅವರು ಕ್ಲಿಯರ್ ಮಾಡಲ್ಲ ಎಂದು ವಿರುದ್ಧ ಗರಂ ಆದರು.
ಇನ್ನು ಖಾಸಗಿ ಆಸ್ಪತ್ರೆಗಳ ಬಗ್ಗೆ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ಬಡವರನ್ನ ಸುಲಿಗೆ ಮಾಡ್ತಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ಹೆಲ್ತ್ ಕಾರ್ಡ್ ರಿಜೆಕ್ಟ್ ಮಾಡಿ, ಕ್ಯಾಶ್ ಕೇಳ್ತಿದ್ದಾರೆ ಎಂದು ಹೇಳಿದರು.










