H. Vishwanath | ಪೊಲೀಸರು ಪೋಕ್ಸೋ ಕಾಯ್ದೆಯನ್ನ ಗಾಳಿಗೆ ತೂರಿದ್ದಾರೆ
ಮೈಸೂರು : ಮುರುಘಾ ಶ್ರೀಗಳ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯನ್ನೆ ಗಾಳಿಗೆ ತೂರಿದ್ದಾರೆ.
ಹೀಗಾಗಿ ಎಸ್ ಪಿ ಅವರನ್ನು ಅಮಾನತು ಮಾಡಬೇಕು ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, ಮುರುಘಾ ಶ್ರೀಗಳ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪೊಲೀಸರು ಪೋಕ್ಸೋ ಕಾಯ್ದೆಯನ್ನೆ ಗಾಳಿಗೆ ತೂರಿದ್ದಾರೆ.
ಹೀಗಾಗಿ ಎಸ್ ಪಿ ಅವರನ್ನು ಅಮಾನತು ಮಾಡಬೇಕು. ಸರ್ಕಾರ ಬಹಳ ಲಘುವಾಗಿ ತೆಗೆದುಕೊಂಡಿದೆ.
ಗೃಹ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮಠದಲ್ಲಿ ಇರುವ ಎಲ್ಲಾ ಸಾಕ್ಷಿಗಳನ್ನು ನಾಶ ಮಾಡಲಾಗಿದೆ.
ಆರೋಪಿಗಳನ್ನು ಇನ್ನು ಬಂಧನ ಮಾಡಿಲ್ಲ. ಇನ್ನೂ ಅವರೆಲ್ಲಾ ಓಡಾಡಿಕೊಂಡು ಇದ್ದಾರೆ ಎಂದು ಬೇಸರ ಹೊರಹಾಕಿದರು.
ಪೊಲೀಸ್ ಇಲಾಖೆ ಚಿತ್ರದುರ್ಗ ಎಸ್ಪಿ ಅವರನ್ನ ಅಮಾನತು ಮಾಡಬೇಕು. ಅವರ ಜಾಗಕ್ಕೆ ದಕ್ಷರನ್ನ ಹಾಕಬೇಕು. ಮಂತ್ರಿಗಳು, ಮಾಜಿ ಮಂತ್ರಿಗಳಿಗೆ ಬುದ್ದಿ ಇದೆಯೋ ಇಲ್ಲವೋ.
ಕಾನೂನು ಬಗ್ಗೆ ತಿಳುವಳಿಕೆ ಇಲ್ಲವಾ. ನೀವು ಯಾವು ಯಾರ ಪರವಾಗಿದ್ದಿರಾ. ಸ್ವಾಮೀಜಿ ಅವರು ಬಗ್ಗೆ ಮಾತ್ನಾಡುವುವರು ಮೊದಲು ಬಾಯಿ ಮುಚ್ಚಿ ಎಂದು ಸ್ವಪಕ್ಷದವರ ವಿರುದ್ಧ ಹೆಚ್ ವಿಶ್ವನಾಥ್ ಕಿಡಿಕಾರಿದರು.
ಪ್ರಸಿದ್ಧವಾದ ಮಠದ ಈ ಮಾಜಿ ಸ್ವಾಮಿಯಿಂದ ಹಾಳಾಗಿದೆ. ಈ ಮಠಕ್ಕೆ ಸಾಂಸಾರಿಕರೇ ಬಂದು ನೋಡಿಕೊಳ್ಳಲಿ. ನಮ್ಮಲ್ಲಿ ಬಹಳ ಜನ ಪೀಠಾಧಿಪತಿ ಇದ್ದಾರೆ ಆದ್ರೆ ಬ್ರಹ್ಮಚಾರಿಗಳು ಇಲ್ಲ.
ಸರ್ಕಾರ ಬಹಳ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಕರ್ನಾಟಕಕ್ಕೆ ಈ ಮಾಜಿ ಸ್ವಾಮಿಯಿಂದ ಅಂಟಿರುವ ಕಳಂಕವನ್ನ ತೊಳೆಯ ಬೇಕಿದೆ.
ಸರ್ಕಾರ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಕೆಲಸ ಮಾಡಬೇಕು ಎಂದು ವಿಶ್ವನಾಥ್ ಹೇಳಿದ್ದಾರೆ.
ಸ್ವಾಮಿಗಳಿಂದ ನಾಡಿಗೆ ಕಳಂಕ ಬಂದಿದೆ. ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಅವರನ್ನ ಯಾಕೆ ಕಾವಿಯಲ್ಲಿ ಕರೆದುಕೊಂಡು ಹೋಗ್ತಾರೆ. ಪೊಲೀಸ್ ಇಲಾಖೆ ಏನ್ ಮಾಡ್ತಿದೆ.
ಇದು ಕಾನೂನಿನಲ್ಲಿ ಇದ್ಯಾ. ಸರ್ಕಾರವೇ ಒಂದು ಸಾಕ್ಷಿ ನಾಶಕ್ಕೆ ಸಹಕಾರ ನೀಡಿದಂತೆ ಇದೆ. ಈ ಪ್ರಕರಣದಲ್ಲಿ ಮಕ್ಕಳ ಚಿಕ್ಕಪ್ಪ, ದೊಡ್ಡಪ್ಪ ಯಾರು ತಲೆ ಹಾಕಬಾರದು.
ಮಕ್ಕಳು, ಕೋರ್ಟ್ ಮಾತ್ರ ಮುಖ್ಯ. ಏನೇ ಇದ್ರು ಕೋರ್ಟ್ ಬಂದು ಹೇಳಲಿ. ಸ್ವಾಮಿಗಳು ಮೌನವಾಗಿದ್ದಾರೆ, ಈಗಾಗಿ ಮಂಪರು ಪರೀಕ್ಷೆ ನಡೆಯಲಿ ಎಂದು ವಿಶ್ವನಾಥ್ ಒತ್ತಾಯಿಸಿದರು.