H1B ವೀಸಾ ವಿಚಾರವಾಗಿ ಉದ್ಯೋಗಿಗಳಿಗೆ ಆಘಾತ ನೀಡಿದ ಟ್ರಂಪ್..!
ಅಮೆರಿಕಾ: H1B ವೀಸಾ ಮೇಲೆ ನಿರ್ಬಂಧ ಹೇರಿ ಉದ್ಯೋಗಿಗಳಿಗೆ ಶಾಕ್ ನೀಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಮತ್ತೊಂದು ದೊಡ್ಡ ಆಘಾತ ನೀಡಿದ್ದಾರೆ. ಅಧಿಕಾರದಿಂದ ಕೆಳಗಿಳಿಯುವ ಸಮಯ ಸಮೀಪವಿರುವಾಗಲೇ H1B ವೀಸಾ ಅಡಿಯಲ್ಲಿ ಅಮೆರಿಕನ್ ಕಂಪನಿಗಳು ಭಾರತ, ಚೀನಾ ಹಾಗೂ ಇತರೆ ರಾಷ್ಟ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ತಾತ್ಕಾಲಿಕವಾಗಿ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತವೆ.
ಅಮೆರಿಕದ ಇತಿಹಾಸದಲ್ಲಿ ಎರಡೆರಡು ಬಾರಿ ದೋಷಾರೋಪಣೆಗೆ ಒಳಗಾದ ಏಕೈಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!
ಈಗ ಟ್ರಂಪ್ ಆಡಳಿತ, ಈ ಕಂಪನಿಗಳು ವಿದೇಶದ ಕೆಲಸಗಾರರಿಗೆ ನೀಡುವ ಕನಿಷ್ಠ ವೇತನ ಮಿತಿಯಲ್ಲಿ ಭಾರೀ ಏರಿಕೆ ಮಾಡುವಂಥ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಒಂದು ವೇಳೆ ಕನಿಷ್ಠ ವೇತನ ಮಿತಿಯಲ್ಲಿ ವಿಪರೀತ ಏರಿಕೆಯಾದರೆ, ಆಗ ಈ ಕಂಪನಿಗಳು ವಿದೇಶಿ ನಾಗರಿಕರಿಗೆ ಉದ್ಯೋಗ ನೀಡಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಇದೇ ತಂತ್ರಗಾರಿಕೆಯಿಂದಲೇ ಟ್ರಂಪ್ ಸರ್ಕಾರ ಈ ರೀತಿಯಾದ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel