ಬಾಗಲಕೋಟೆ : ಮಾನಸಿಕ ಅಸ್ವಸ್ಥನಿಗೆ ಕಟಿಂಗ್ ಹಾಗೂ ಸೇವ್ ಮಾಡುವ ಮೂಲಕ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಮುಖ್ಯಾಧಿಕಾರಿ ರವೀಂದ್ರ ಅಂಗಡಿ, ಸಮುದಾಯ ಸಂಘಟನಾಧಿಕಾರಿ ಸಿ.ಎಸ್.ಮಠಪತಿ ಹಾಗೂ ಸಿಬ್ಬಂದಿಯಿಂದ ಮಾನಸಿಕ ಅಸ್ವಸ್ಥನಿಗೆ ಕ್ಷೌರ ಸೇವೆ ಮಾಡಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಎಲ್ಲಿಯೂ ಕಟಿಂಗ್ ಶಾಪ್ ತೆರೆದಿರಲಿಲ್ಲ. ಕೊಳೆಯಾದ ಬಟ್ಟೆ, ಕೂದಲು ಬಿಟ್ಟುಕೊಂಡು ತಿರುಗಾಡುತ್ತಿದ್ದ
ಮಾನಸಿಕ ಅಸ್ವಸ್ಥನನ್ನು ಕರೆತಂದು ಪುರಸಭೆ ಸಿಬ್ಬಂದಿ ಆತನಿಗೆ ನೀಟಾಗಿ ಕ್ಷೌರ, ದಾಡಿ ಮಾಡಿ ಹೊಸಬಟ್ಟೆ ಕೊಡೆಸಿದರು. ಹೊಸಬಟ್ಟೆಯಲ್ಲಿ ಮಾನಸಿಕ ಅಸ್ವಸ್ಥ ಲಕಲಕ ಕಾಣಿಸುತ್ತಿದ್ದಾನೆ. ಪುರಸಭೆ ಸಿಬ್ಬಂದಿಯ ಮಾನವಿಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಸಂಪುಟ ಪುನಾರಚನೆಯೋ ಅಥವಾ ಅಧಿಕಾರ ಹಸ್ತಾಂತರವೋ ಕಾಲವೇ ನಿರ್ಣಯಿಸಲಿದೆ : ಕೆಸಿ ವೇಣುಗೋಪಾಲ್ ಹೇಳಿಕೆಗೆ ಡಿಕೆಶಿ ಮಾರ್ಮಿಕ ಉತ್ತರ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಸ್ತಾಂತರದ ಚರ್ಚೆಗಳು ಗರಿಗೆದರಿವೆ. ಕರ್ನಾಟಕದಲ್ಲಿ ಪ್ರಭಾವಿ ಸಿಎಂ ಇದ್ದಾರೆ, ಸದ್ಯಕ್ಕೆ ಸಿಎಂ ಹುದ್ದೆ ಖಾಲಿ...








