ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಬರ್ಬರ ಹತ್ಯೆ
ಹೈಟಿ ದೇಶದ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರನ್ನ ಅವರ ನಿವಾಸದಲ್ಲಿಯೇ ಬರ್ಬರವಾಗಿ ಹತ್ಯೆಮಾಡಲಾಗಿದೆ.. ಹೌದು 53 ವರಷ್ದ ಮೊಯಿಸ್ ಅವರನ್ನ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿದೆ. ಗುಂಡಿನ ದಾಳಿಯಲ್ಲಿ ಜೋವೆನಿಲ್ ಮೊಯಿಸ್ ಅವರ ಪತ್ನಿ ಮಾರ್ಟಿನೆ ಮೊಯಿಸ್ ಕೂಡಾ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಮಧ್ಯಂತರ ಪ್ರಧಾನಿ ಕ್ಲೌಡ್ ಜೋಸೆಫ್ ಪ್ರಕಟಿಸಿದ್ದಾರೆ. ತಾನು ದೇಶದ ಉಸ್ತುವಾರಿ ವಹಿಸಿಕೊಂಡಿರುವುದಾಗಿ ಜೋಸೆಫ್ ಹೇಳಿದ್ದಾರೆ. ಸಾರ್ವಜನಿಕರು ಶಾಂತವಾಗಿರಬೇಕು ಎಂದು ಒತ್ತಾಯಿಸಿರುವ ಅವರು, ಪೊಲೀಸ್ ಮತ್ತು ಸೇನೆಯು ಜನರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಸೂಚಿಸಿದ್ದಾರೆ.
ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಯನ್ನು ಮಾತನಾಡುವ ವಿದೇಶಿಯರು ಅಧ್ಯಕ್ಷರನ್ನು ಅವರ ಮನೆಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಜೋಸೆಫ್ ಹೇಳಿದ್ದಾರೆ. ಅಂದ್ಹಾಗೆ ಹೈಟಿ ಅಮೆರಿಕ ಖಂಡದಲ್ಲೇ ಅತ್ಯಂತ ಬಡ ರಾಷ್ಟ್ರವಾಗಿದೆ. 2017ರಿಂದ ಹೈಟಿಯಲ್ಲಿ ಮೊಯಿಸ್ ಅವರು ಆಡಳಿತ ನಡೆಸುತ್ತಿದ್ದರು. ಇನ್ನೂ ಅವರ ಹತ್ಯೆಗೆ ರಾಜಕೀಯದ ಲಿಂಕ್ ಇರುವ ಅನುಮಾನವೂ ವ್ಯಕ್ತವಾಗಿದೆ.. ಮೊಯಿಸ್ ಅವರ ಅಧಿಕಾರ ಅವಧಿ ಈ ವರ್ಷದ ಫೆಬ್ರುವರಿಯಲ್ಲೇ ಅಂತ್ಯವಾಗಿತ್ತು. ಹೀಗಾಗಿ ಮೊಯಿಸ್ ಅವರು ರಾಜೀನಾಮೆ ನೀಡಬೇಕು ಎಂಬ ಒತ್ತಡ ಹೆಚ್ಚಿತ್ತು.ಈ ಮಧ್ಯೆ ಅವರ ಹತ್ಯೆಯಾಗಿದ್ದು, ದೇಶದ ಜನರನ್ನ ಬೆಚ್ಚಿ ಬೀಳಿಸಿದೆ..