15 ದಿನಗಳ ನಂತ್ರ ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತೆ : ಸಿಎಂ ಎಚ್ಚರಿಕೆ

1 min read
Belgaum saaksha tv

15 ದಿನಗಳ ನಂತ್ರ ಮತ್ತೆ ಲಾಕ್ ಡೌನ್ ಮಾಡಬೇಕಾಗುತ್ತೆ ಎಂದ್ರು ಸಿಎಂ

ಚಿಕ್ಕಬಳ್ಳಾಪುರ : ಅನ್ ಲಾಕ್ ಆಗಿದೆ ಎಂದು ಜನರೇ ಮೈ ಮರೆಯಬೇಡಿ. ಸರ್ಕಾರದ ಜೊತೆಗೆ ಸಹಕರಿಸಿ. ಇಲ್ಲವಾದರೇ ಮತ್ತೆ 15 ದಿನಗಳ ನಂತರ ಈ ಹಿಂದಿನ ಲಾಕ್ ಡೌನ್ ಪರಿಸ್ಥಿತಿ ಜಾರಿ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕೊರೊನಾ ಮೂರನೇ ಅಲೆ ಎದುರಿಸಲು ದೇಶದಲ್ಲಿ ಮೊಟ್ಟ ಮೊದಲ 70 ಹಾಸಿಗೆಗಳ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದ್ದೇವೆ.

ಭಾರತದ ಆರು ರಾಜ್ಯದಲ್ಲಿ ಮಾತ್ರವೇ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗುತ್ತಿದೆ. ದೇಶದಲ್ಲಿ ಮೊದಲು ನಮ್ಮ ರಾಜ್ಯದಲ್ಲಿ ಈ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ ಆಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಸಹಕಾರ ನೀಡಿದ ಖಾಸಗಿ ಸಂಸ್ಥೆಗಳಿಗೆ ಸರ್ಕಾರದಿಂದ ಧನ್ಯವಾದ ಸಲ್ಲಿಸುತ್ತೇನೆ ಎಂದರು.

lockdown

ಇನ್ನ ಕೊರೊನಾ ವಿಚಾರವಾಗಿ ಕೊರೊನಾ ಕಂಟ್ರೋಲ್ ಗೆ ಸರ್ಕಾರ ಆನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ವಿಶ್ವಾಸ ನನಗಿದೆ.

ಆದರೆ ನಾನು ಸಾರ್ವಜನಿಕರಲ್ಲಿ ಒಂದು ಮನವಿ ಮಾಡುತ್ತೇನೆ. ಜನರೇ ಲಾಕ್ ಡೌನ್ ಸಡಿಲಿಕೆ ಆಗಿದೆ ಎಂದು ಬೇಕಾಬಿಟ್ಟಿ ಒಡಾಡಬೇಡಿ. ವ್ಯಾಪಾರ ವಹಿವಾಟು ಮಾಡುವಾಗ ಎಚ್ಚರವಹಿಸಿ.

ಸದಾ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವ್ಯವಹರಿಸಿ. ಸರ್ಕಾರದ ಜೊತೆ ಸಹಕರಿಸಿ. ಇಲ್ಲವಾದರೆ ಮತ್ತೆ 15 ದಿನಗಳ ನಂತರ ಈ ಹಿಂದಿನ ಲಾಕ್ ಡೌನ್ ಪರಿಸ್ಥಿತಿ ಜಾರಿ ಮಾಡಬೇಕಾಗುತ್ತದೆ ಎಂದು ಜನರಲ್ಲಿ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd