Hala Controversy: ಹಲಾಲ್ ವಿಚಾರವಾಗಿ ಗಲಾಟೆ | ಎರಡು ಕಡೆ ಪ್ರಕರಣ ದಾಖಲು

1 min read
Shivamogga Saaksha Tv

ಹಲಾಲ್ ವಿಚಾರವಾಗಿ ಗಲಾಟೆ | ಎರಡು ಕಡೆ ಪ್ರಕರಣ ದಾಖಲು

ಶಿವಮೊಗ್ಗ: ಸಧ್ಯ ರಾಜ್ಯದಲ್ಲಿ ಹಲಾಲ್ ಅತೀವ ಸುದ್ದಿಯಲ್ಲಿದ್ದು, ಯುವಕರ ಗುಂಪೊಂದು ಮಟನ್ ಹೋಗಿ ನಮಗೆ ಹಲಾಲ್ ಮಾಡದ ಮಟನ್ ಕೊಡಿ ಎಂದು ಪಟ್ಟು ಹಿಡದಿರುವ ಘಟನೆ ಜಿಲ್ಲೆಯ ಭದ್ರಾಪತಿ ಪಟ್ಟಣದಲ್ಲಿ ನಡೆದಿದೆ.

ಯವಕರ ಭದ್ರಾವತಿಯ ಹೊಸಮನೆ ಬಡಾವಣೆಯ ಮಟನ್ ಅಂಗಡಿಗೆ ಹೋಗಿ ನಮಗೆ ಹಲಾಲ್ ಮಾಡಡದ ಮಟನ್ ಕೊಡಿ ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಎರಡು ಕಡೆ ಪ್ರಕರಣ ದಾಖಲಾಗಿದೆ.

ಅಂಗಡಿಗೆ ಹೋದ ಯುವಕರ ಗುಂಪು ಇಲ್ಲಿ ಶೇ.99 ರಷ್ಟು ಮಂದಿ ಹಿಂದೂಗಳಿದ್ದಾರೆ.‌ ಹಾಗಾಗಿ ಇನ್ನು ಮುಂದೆ ಹಲಾಲ್ ಮಾಡದ ಮಟನ್ ನೀಡಬೇಕು ಎಂದು ಪಟ್ಟು ಹಿಡದಿದ್ದಾರೆ. ಈ ಕುರಿತು ಮಟನ್ ಅಂಗಡಿಯವರು ಹೊಸಮನೆ ಪೊಲೀಸ್ ಠಾಣೆಯಲ್ಲಿ ತನ್ನ ಅಂಗಡಿಗೆ ಬಂದವರು ಅವಾಚ್ಯ ಪದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಭದ್ರಾವತಿಯ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಹೋಟೆಲ್​​ಗೆ ಹೋದ ಯುವಕರ ತಂಡ ಇನ್ನು ಮುಂದೆ ಹಲಾಲ್ ಕಟ್​​ ಮಾಡಿದ ಮಟನ್​ ಊಟ ಸಿಗಬಾರದು. ಜಟ್ಕಾ ಕಟ್ ಮಾಡಿದ ಮಟನ್​​ ಊಟವೇ ಸಿಗಬೇಕು ಎಂದು ಹೇಳಿದ್ದಾರೆ. ಅಲ್ಲದೇ ಹೋಟೆಲ್​​ನಲ್ಲಿದ್ದ ಗ್ರಾಹಕನೋರ್ವನ ಜತೆ ಜಗಳವಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಭಾಗಿಯಾದ ಏಳು ಜನರನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಲಕ್ಷ್ಮಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd