ರಾಜ್ಯದಲ್ಲಿ ಹಾಫ್ ಲಾಕ್ ಡೌನ್ : ಯಾವುದು ಇರುತ್ತೆ… ಯಾವುದು ಇರಲ್ಲ Lockdown karnataka saaksha tv
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಹೆಮ್ಮಾರಿ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಒಂದಿಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಿದೆ.
ನಿನ್ನೆ ಮ್ಯಾರಥಾನ್ ಸಭೆಗಳನ್ನು ನಡೆಸಿದ ರಾಜ್ಯ ಸರ್ಕಾರ ನಾಳೆಯಿಂದ ಜಾರಿಗೆ ಬರುವಂತೆ ಹಾಫ್ ಲಾಕ್ ಡೌನ್ ಜಾರಿ ಮಾಡಿದೆ.
ಮಾರ್ಗಸೂಚಿ ಹೇಗಿದೆ..?
ಬೆಂಗಳೂರಲ್ಲಿ ನಾಳೆಯಿಂದ ಮುಂದಿನ 2 ವಾರ 10 ಮತ್ತು 11,12ನೇ ತರಗತಿ ಹೊರತುಪಡಿಸಿ ಉಳಿದೆಲ್ಲಾ ತರಗತಿಗಳು ಬಂದ್
ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ
ಸಾರ್ವಜನಿಕ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೇಕಡಾ 50 ರಷ್ಟು ಜನರಿಗೆ ಅವಕಾಶ, ಡಬಲ್ ಡೋಸ್ ಕಡ್ಡಾಯ
ಹೊರಾಂಗಣ ಮದುವೆಗಳಿಗೆ 200ಜನರಿಗೆ ಅವಕಾಶ, ಒಳಾಂಗಣ ಮದುವೆಗಳಿಗೆ 100 ಜನರಿಗೆ ಅವಕಾಶ
ಮೇಟ್ರೋ, ಬಸ್, ರೈಲು ಸೀಟುಗಳಿಗೆ ಅನುಗುಣವಾಗಿ ಅವಕಾಶ
ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಶೇಕಡಾ 50 ರಷ್ಟು ಜನ ಸೇರಲು ಅವಕಾಶ
ಕ್ರೀಡಾ, ಜಿಮ್, ಸ್ವಿಮ್ಮಿಂಗ್ ಪೂಲ್ ಗಳಲ್ಲಿ ಶೇಕಡಾ 50 ರಷ್ಟು ಅವಕಾಶ
ರಾಜಕೀಯ ರ್ಯಾಲಿ, ಧರಣಿ, ಪ್ರತಿಭಟನೆಗಳಿಗೆ ಸಂಪೂರ್ಣ ನಿರ್ಬಂಧ