ಹ್ಯಾಲೋವೀನ್ ಉತ್ಸವದಲ್ಲಿ ಕಾಲ್ತುಳಿತ 151 ಸಾವು….
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ನಡೆದ ಹ್ಯಾಲೋವೀನ್ ಹಬ್ಬದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 151 ಕ್ಕೂ ಹೆಚ್ಚು ಜನರು ಸಾವನವನಪ್ಪಿದ್ದಾರೆ. ಇವರಿಲ್ಲಿ ಹೆಚ್ಚು ಜನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಲ್ತುಳಿತದಲ್ಲಿ 82 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇಟಾವಾನ್ ಲೆಸ್ಸರ್ ಪ್ರದೇಶದಲ್ಲಿ ಉತ್ಸವ ಆಚರಿಸುವಾಗ ಕಿರಿದಾದ ರಸ್ತೆಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಿಂದ ಕಾಲ್ತುಳಿತ ಉಂಟಾಗಿದೆ. ಕಿಕ್ಕಿರಿದ ಜನರ ನಡುವೆ ಸಿಲುಕಿ ಹಲವರಿಗೆ ಹೃದಯಸ್ತಂಭನವಾಗಿದೆ ಎಂದು ಪೊಲೀಸ್ ಅಧಿಕಾರಿ ಚೋಯ್ ಚಿಯೋನ್-ಸಿಕ್ ಹೇಳಿದ್ದಾರೆ. ಮೃತಪಟ್ಟವರಲ್ಲಿ 19 ವಿದೇಶಿ ಪ್ರಜೆಗಳು ಸೇರಿದ್ದಾರೆ. ಅಪಘಾತದ ನಂತರ ದೇಶದಲ್ಲಿ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.
SK President announced a period of national mourning and ordered the lowering of flags after a deadly stampede killed at least 155 people, including 19 foreigners, during #Halloween celebrations in #Seoul.#SouthKorea #CardiacArrest #Itaewon #이태원 pic.twitter.com/2576DEetQ5
— Chaudhary Parvez (@ChaudharyParvez) October 30, 2022
ಹಲವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತುರ್ತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲಾ ಜನರಿಗೆ ಸಿಪಿಆರ್ ನೀಡಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ದಕ್ಷಿಣ ಕೊರಿಯಾ ಅಧ್ಯಕ್ಷ ಯುನ್ ಸುಕ್ ಯೊಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Halloween: 151 killed in stampede at South Korea’s Halloween festival…