Hansika Motwani : ಮೆಹಂದಿ ಕಾರ್ಯದಲ್ಲಿ ಮಿಂಚಿದ ಬಿಂದಾಸ್ ಹುಡುಗಿ….
ಕನ್ನಡದ ‘ಬಿಂದಾಸ್’ ಹುಡುಗಿ ನಟಿ ಹನ್ಸಿಕಾ ಮೋಟ್ವಾನಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದು, ಮದುವೆ ಪೂರ್ವ ಶುಭಕಾರ್ಯಗಳೆಲ್ಲವೂ ಪ್ರಾರಂಭವಾಗಿವೆ. ಇತ್ತೀಚೆಗೆ ಮೆಹಂದಿ ಸಮಾರಂಭದ ಪೊಟೋ ವೀಡಿಯೋಗಳು ಬಿಡುಗಡೆಯಾಗಿ ವೈರಲ್ ಆಗಿವೆ. ಶುಭಕಾರ್ಯದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದಾರೆ.
ಮೆಹೆಂದಿ ಸಮಾರಂಭದಲ್ಲಿ ಹನ್ಸಿಕಾ ಕಿತ್ತಳೆ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ವರ ಸೊಹೈಲ್ ಕಥುರಿಯಾ ಪೀಚ್ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಜೋಡಿಗಳಿಬ್ಬರು ಜೈಪುರದ 450 ವರ್ಷಗಳಷ್ಟು ಹಳೆಯದಾದ ಕೋಟೆಯಲ್ಲಿ ಸಿಂಧಿ ಸಂಪ್ರದಾಯದ ಪ್ರಕಾರ ವಿವಾಹವಾಗಲಿದ್ದಾರೆ.
A glimpse of @ihansika at her mehendi ceremony ✨💖#Hansika #HansikaMotwani #Tollywood #TollywoodActress #SohaelKhaturiya pic.twitter.com/Fxbe3WM0p2
— Hyderabad Times (@HydTimes) December 2, 2022
ಇದಕ್ಕೂ ಮೊದಲು ಹನ್ಸಿಕಾ ತನ್ನ ಗರ್ಲ್ಸ್ ಗ್ಯಾಂಗ್ ನೊಂದಿಗೆ ಗ್ರೀಸ್ ದೇಶದಲ್ಲಿ ಬ್ಯಾಚುಲರ್ ಪಾರ್ಟಿಯನ್ನ ಆಚರಿಸಿಕೊಂಡಿದ್ದಾರೆ. ನಟಿ ಶ್ರೀಯಾ ರೆಡ್ಡಿ ಸೇರಿದಂತೆ ಅವರ ಅನೇಕ ಸ್ನೇಹಿತರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಫ್ರಾನ್ಸ್‌ನ ಪ್ರಸಿದ್ಧ ಐಫೆಲ್ ಟವರ್ ಮುಂದೆ ಬಾವಿ ಪತಿ ಸೊಹೈಲ್ ಪ್ರಪೋಸ್ ಮಾಡುತ್ತಿರುವ ಪೋಟೋಗಳನ್ನ ಹಂಚಿಕೊಳ್ಳುವ ಮೂಲಕ ನಟಿ ಹನ್ಸಿಕಾ ತಾವು ಮದುವೆಯಾಗುತ್ತಿರುವ ಸುದ್ದಿಯನ್ನ ಹಂಚಿಕೊಂಡಿದ್ದರು.
Hansika Motwani – Hansika Motwani Pre Wedding Function








