ಚಂಡೀಗಢ: ಇತ್ತೀಚೆಗೆ ದೇಶದಲ್ಲಿ ರಾಮ ಹಾಗೂ ಆತನ ಭಂಟ ಹನುಮನ ಬಗ್ಗೆ ಗುಣಗಾನಗಳು ಹೆಚ್ಚಾಗುತ್ತಿವೆ. ಈ ಮಧ್ಯೆ ಹನುಮನ ವೇಷಧಾರಿಯೊಬ್ಬರು (Lord Hanuman) ವೇದಿಕೆಯಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹರೀಶ್ ಮೆಹ್ತಾ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್ ನಲ್ಲಿ ಹನುಮನ ಪಾತ್ರ ನಿರ್ವಹಿಸಿದ್ದರು.
ಈ ವೇಳೆ ಮೆಹ್ತಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಪ್ರೇಕ್ಷಕರು ಮಾತ್ರ ಇದು ಸ್ಕಿಟ್ ಭಾಗವೆಂದು ಭಾವಿಸಿ ಕೂಡಲೇ ಯಾರೂ ರಕ್ಷಣೆಗೆ ಬಂದಿಲ್ಲ. ಆದರೆ, ಕೆಲವು ಹೊತ್ತಾದರೂ ಮೆಹ್ತಾ ಮೇಲೆ ಏಳದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡು ಆಸ್ಪತ್ರೆಗೆ ಸಾಗಿಸ್ದಾದರೆ. ಆದರೆ, ಅಷ್ಟೊತ್ತಿಗಾಗಲೇ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಹೃದಯಾಘಾತದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.