ವಿಶ್ವದಲ್ಲಿ ಖುಷಿಯಾಗಿರುವ ವಿಚಾರದಲ್ಲಿ ಭಾರತವನ್ನ ಹಿಂದಿಟ್ಟ ಪಾಕಿಸ್ತಾನ, ಚೈನಾ..!

1 min read

ವಿಶ್ವದಲ್ಲಿ ಖುಷಿಯಾಗಿರುವ ವಿಚಾರದಲ್ಲಿ ಭಾರತವನ್ನ ಹಿಂದಿಟ್ಟ ಪಾಕಿಸ್ತಾನ, ಚೈನಾ..!

ಖುಷಿಯಾಗಿರುವ ವಿಚಾರದಲ್ಲಿ ಪಾಕಿಸ್ತಾನವು ಭಾರತವನ್ನ ಹಿಂದಿಟ್ಟಿದೆ. ಹೌದು.. ವಿಶ್ವ ಸಂಸ್ಥೆಯ ಜಾಗತಿಕ ಸಂತೋಷ ವರದಿ 2021ರಲ್ಲಿ ಈ ವಿಚಾರ ಬಹಿರಂಗವಾಗಿದೆ. 149 ರಾಷ್ಟ್ರಗಳಲ್ಲಿ ಈ ವಿಚಾರದಲ್ಲಿ ಭಾರತಕ್ಕೆ 139ನೇ ಸ್ಥಾನ ಸಿಕ್ಕಿದೆ.  ಅಂದ್ಹಾಗೆ ಭಾರತವು 2019 ಮತ್ತು 2020ರಲ್ಲಿ ಕ್ರಮವಾಗಿ 140 ಹಾಗೂ 144ನೇ ಸ್ಥಾನದಲ್ಲಿತ್ತು. ಇದೀಗ 139ನೇ ಸ್ಥಾನದಲ್ಲಿದೆ.

ಇತ್ತ ಪಾಕಿಸ್ತಾನವು ಖುಷಿಯಾಗಿರುವ ವಿಚಾರದಲ್ಲಿ 105 ಹಾಗೂ ಚೈನಾ 84ನೇ ಸ್ಥಾನದಲ್ಲಿದೆ.  ಈ ವರ್ಷದ ವಿಶ್ವ ಸಂತೋಷ ವರದಿಯ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಸಮೀಕ್ಷೆಯ ಪ್ರಕಾರ ಫಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿದ್ದು, ಐಸ್​ಲ್ಯಾಂಡ್, ಡೆನ್ಮಾರ್ಕ್, ಸ್ವಿಟ್ಜರ್ಲೆಂಡ್, ನೆದರ್​ಲ್ಯಾಂಡ್​, ಸ್ವೀಡನ್, ಜರ್ಮನಿ ಮತ್ತು ನಾರ್ವೆ ನಂತರದ ಸ್ಥಾನದಲ್ಲಿವೆ. ವಿಶ್ವದ ದೊಡ್ಡಣ್ಣ ಅಮೆರಿಕಾ 19ನೇ ಸ್ಥಾನದಲ್ಲಿದೆ.

ಅಂದ್ಹಾಗೆ  ಜನರ ಜೀವನದ ರಚನೆ ಮತ್ತು ಗುಣಮಟ್ಟದ ಮೇಲೆ ಕೋವಿಡ್​-19ರ ಪರಿಣಾಮಗಳನ್ನು ಕೇಂದ್ರೀಕರಿಸುವುದು, ಹಾಗೂ ಪ್ರಪಂಚದಾದ್ಯಂತದ ಸರ್ಕಾರಗಳು ಸಾಂಕ್ರಾಮಿಕ ರೋಗವನ್ನು ಹೇಗೆ ಎದುರಿಸಿದೆ ಎಂಬುದನ್ನು ವಿವರಣೆ ಮತ್ತು ಮೌಲ್ಯಮಾಪನ ಮಾಡಿ  ರಿಪೋರ್ಟ್  ತಯಾರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ಮುಂದೆ ತುಂಡು ಬಟ್ಟೆ ಧರಿಸಿದವರಿಗೆ ಶಾಮ್ಲಜಿ ವಿಷ್ಣು ದೇವಸ್ಥಾಕ್ಕೆ ಪ್ರವೇಶವಿಲ್ಲ..!

ರೈಲಿನಲ್ಲಿ ಸಿಗರೇಟ್ ಸೇದುವ ಮುನ್ನ ಎಚ್ಚರ… ಎಚ್ಚರ…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd