ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Happy Birthday Darshan : ‘ಮೆಜೆಸ್ಟಿಕ್’ ನಿಂದ ಆರಂಭವಾದ ಡಿಬಾಸ್ ಸಿನಿಮಾ ಜರ್ನಿ….

Namratha Rao by Namratha Rao
February 16, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Happy Birthday Darshan : ‘ಮೆಜೆಸ್ಟಿಕ್’ ನಿಂದ ಆರಂಭವಾದ ಡಿಬಾಸ್ ಸಿನಿಮಾ ಜರ್ನಿ….

ಅಭಿಮಾನಿಗಳ ಪಾಲಿನ ದಾಸ… ಸ್ಯಾಂಡಲ್ ವುಡ್ ನ ಡಿ ಬಾಸ್… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ… ಚಂದನವನದ ‘ಒಡೆಯ’ ಇಂದು 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ…

Related posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

August 7, 2026
indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

August 7, 2026

‘ಯಜಮಾನ’ನ ಹುಟ್ಟುಹಬ್ಬವನ್ನು ದಚ್ಚು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬದಂತೆ ಸೆಲಬ್ರೇಟ್ ಮಾಡ್ತಿದ್ದಾರೆ… ಸಾಮಾಜಿಕ ಜಾಲತಾಣಗಳಲ್ಲಿ ‘ ಪ್ರಿನ್ಸ್’ ಗೆ ಅಭಿಮಾನಿಗಳು , ಸಿನಿ ತಾರೆಯರು , ಆಪ್ತರು , ಇತರರು ಶುಭಾಶಯಗಳ ಮಹಾಪೂರವನ್ನ ಹರಿಸುತ್ತಿದ್ದಾರೆ…

ಪ್ರತಿ ವರ್ಷ ‘ಬಾಸ್’ ಬರ್ತ್ ಡೇ ಬಂತಂದ್ರೆ ಸಾಕು ದಾಸನ ಫ್ಯಾನ್ಸ್ ಮಧ್ಯರಾತ್ರಿಯಿಂದಲೇ ದರ್ಶನ ಮನೆ ಮುಂದೆ ಜಮಾಯಿಸಿಬಿಡ್ತಿದ್ದರು… ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡ್ತಿದ್ದರು… ಆದ್ರೆ  ಕೋವಿಡ್ ಕಾರಣದಿಂದಾಗಿ ಕಳೆದೊಂಡೆರೆಡು ವರ್ಷಗಳಿಂದ ‘ಕೆಂಚ’ ಅಭಿಮಾನಿಗಳ ಜೊತೆಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ…

ಆದ್ರೆ ವಿಡಿಯೋ ಮೂಲಕ ‘ಮಿಸ್ಟರ್ ಐರಾವತ’ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ…

ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ.  2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ’. ಆದಷ್ಟು ಬೇಗ ನಿಮ್ಮನ್ನ ಭೇಟಿಯಾಗುವೆ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ..

ಮೆಜೆಸ್ಟಿಕ್ ನಿಂದ ಆರಂಭವಾದ ಡಿ ಬಾಸ್ ಸಿನಿಮಾ ಪಯಣ…

ಚಂದನವನದ ಹಿರಿನ ನಟ ತೂಗುದೀಪ ಶ್ರೀನಿವಾಸ ಅವರ ಪುತ್ರ ದರ್ಶನ್ ಅವರು , ನಿನಾಸಮ್ ನಲ್ಲಿ ತರಬೇತಿ ಪಡೆದು , ಸಿನಿಮಾರಂಗದಲ್ಲಿ ತೆರೆ ಹಿಂದೆ ಕೆಲಸ ಮಾಡಲು ಆರಂಭಿಸಿದರು,,,  ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿದರು, ನಂತರ ಸಣ್ಣ ಪುಟ್ಟ ಆಡ್ ಗಳಲ್ಲಿ ಕಾಣಿಸಿಕೊಂಡರು ,, ಬಳಿಕ ಮೊದಲ ಬಾರಿಗೆ 1997 ರಲ್ಲಿ ಮಹಾಭಾರತ ಸಿನಿಮಾದಲ್ಲಿ ಪೂಷಕ ಪಾತ್ರದಲ್ಲಿ ನಟಿಸಿದರು ,        2000 ದಲ್ಲಿ ದೇವರ ಮಗ ಸಿನಿಮಾದಲ್ಲಿ ಕಾಣಿಸಿಕೊಂಡರು. ನಂತರ ಎಲ್ಲರ ಮನೆ ದೋಸೆನೂ , ಭೂತಯ್ಯನ ಮಕ್ಕಳು , ಮಿಸ್ಟರ್ ಹರೀಶ್ಚಂದ್ರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡರು..darshan

ಇವರಿಗೆ ಮೇಜರ್ ಬ್ರೇಕ್ ತಂದುಕೊಟ್ಟ ಸಿನಿಮಾ ಚಂದನವನಕ್ಕೆ ಡಿಬಾಸ್ ಮಾಡಿದ ಸಿನಿಮಾ ಅಂದ್ರೆ ಅದು 2001 ರಲ್ಲಿ ತೆರಕಂಡ ಮೆಜೆಸ್ಟಿಕ್ ಸಿನಿಮಾ… ಈ ಸಿನಿಮಾ ಬಂದು 20 ವರ್ಷಗಳಾಗಿದೆ.. ಈಗಲೂ ಈ ಸಿನಿಮಾಗೆ ಅದೇ ಕ್ರೇಜ್ ಇದೆ.. ಇಲ್ಲಿಂದ ಶುರುವಾದ ‘ಸಾರಥಿ’ಯ ಜರ್ನಿ ‘ಚಿಂಗಾರಿ’ಯಂತೆ  ಸ್ಯಾಂಡಲ್ ವುಡ್ ನಲ್ಲಿ ಹಬ್ಬಿತ್ತು… ನಂತರ

ಕಿಟ್ಟಿ , ನಿನಗೋಸ್ಕರ , ನೀನಂದ್ರೆ ಇಷ್ಟ , ದಾಸ, ಕರಿಯ , ಲಾಲಿ ಹಾಡು , ನಮ್ಮ ಪ್ರೀತಿಯ ರಾಮು ಸಿನಿಮಾಗಳಲ್ಲಿ ದರ್ಶನ್ ತರ ತರವಾಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡು ಇಷ್ಟೊತ್ತಿಗೆ ಅಪಾರ ಪ್ರಮಾಣದ ಅಭಿಮಾನಿಗಳನ್ನ ಸಂಪಾನೆ ಮಾಡಿದರು…            

 ಇದಾದ ನಂತರ ದಾಸನ ಮತ್ತೊಂದು ಎರಾ ಶುರುವಾಗಿತ್ತು… ಬಾಸ್ , ಪ್ರಿನ್ಸ್ ,ಸಾರಥಿ , ಚಿಂಗಾರಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ , ಅಂಬರೀಶ, ಮಿಸ್ಟರ್ . ಐರಾವತ ,ವಿರಾಟ್ , ಜಗ್ಗು ದಾದ , ಚಕ್ರವರ್ತಿ , ತಾರಕ್ , ಯಜಮಾನ , ಕುರುಕ್ಷೇತ್ರ , ಒಡೆಯದಲ್ಲಿ ನಟಿಸಿದರು.. ಈ ಸಿನಿಮಾಗಳು ಬ್ಲಾಕ್ ಬಾಸ್ಟರ್ ಎನಿಸಿಕೊಂಡವು…

ಕಡೆಯದಾಗಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಿದೆ… ಈ ನಡುವೆ ದರ್ಶನ್ ಅವರ ಹೊಸ ಸಿನಿಮಾ ಕ್ರಾಂತಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ… ದಾಸನ ಹುಟ್ಟುಹಬ್ಬದ ಪ್ರಯುಕ್ತ ಕ್ರಾಂತಿ ಸಿನಿಮಾ ತಂಡವು ಹೊಸ ಪೋಸ್ಟರ್ ಕೂಡ ರಿಲೀಸ್ ಮಾಡಿದೆ..

 

Tags: #saakshatvcinibazaarDarshanhappy birthday darshanSandalwood
ShareTweetSendShare
Join us on:

Related Posts

indina-rashi-bhavishya-12-rashigala-phala-pandit-gyaneshwar-rao-astrology-katilu-durgaparameshwari-remedies

astro-ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

by admin
August 7, 2026
0

    ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು...

indian-cricket-rajaparampare-gavaskar-sachin-kohli

ರಾಜಮಾತೆಯ ರಾಜ್ಯಭಾರ..! ಮಹಾರಾಜರ ವೈಭವ..! ದಂಡನಾಯಕರ ತ್ಯಾಗ..! ಸೈನಿಕರ ಹೋರಾಟ..! ಇದೇ ಭಾರತೀಯ ಕ್ರಿಕೆಟ್‍ನ ರಾಜಪರಂಪರೆ..!

by admin
August 7, 2026
0

ಅಂದು..! ಸಾಮ್ರಾಜ್ಯ ವಿಸ್ತರಿಸಲು ಯುದ್ಧ ಗೆಲ್ಲುವ ರಾಜ, ಮಹಾರಾಜನಾಗಿ ಸಿಂಹಾಸನದ ಪಟ್ಟಕ್ಕೇರುತ್ತಿದ್ದ. ಅವನ ಒಡ್ಡೋಲಗದ ಪ್ರಭಾವಳಿಯ ಮುಂದೆ ದಂಡನಾಯಕರ ಮತ್ತು ಸೈನಿಕರ ವೀರೋಚಿತ ಹೋರಾಟ ಮಂಕಾದ ಬೆಳಕಿನಲ್ಲಿ...

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

ಬ್ರಾಹ್ಮಣ ಸಮುದಾಯಕ್ಕೆ ಸಚಿವ ಸ್ಥಾನ ತಪ್ಪಿದ್ದು ನಿಜ: ನನ್ನನ್ನು ಸಮಾಧಾನಪಡಿಸುವ ಅಗತ್ಯವಿಲ್ಲ ಸಚಿವ ಸ್ಥಾನದ ವಿಚಾರ ಈಗ ಮುಗಿದ ಅಧ್ಯಾಯ ಎಂದ ದಿನೇಶ್‌ ಗುಂಡೂರಾವ್

by Shwetha
August 7, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ನಂತರ ಅತೃಪ್ತಗೊಂಡಿರುವ ಶಾಸಕರ ಪಟ್ಟಿಯಲ್ಲಿ ಕೇಳಿಬರುತ್ತಿರುವ ಮಾಜಿ ಸಚಿವ ದಿನೇಶ್‌ ಗುಂಡೂರಾವ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನ...

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

by Shwetha
August 7, 2026
0

ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ...

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

ಲಾಲ್‌ಬಾಗ್ 220ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಡಿಕೆಶಿ ಚಾಲನೆ

by Shwetha
August 7, 2026
0

ಬೆಂಗಳೂರು ನಗರದ ಐತಿಹಾಸಿಕ ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ನಿನ್ನೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ಆಗಸ್ಟ್ 6ರಿಂದ ಆಗಸ್ಟ್ 17ರವರೆಗೆ ಒಟ್ಟು 12 ದಿನಗಳ ಕಾಲ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram