“ಐಮ್ ನೋ ಗಾಡ್.. ಬಟ್ ಐಮ್ ನಾಟ್ ಒನ್ ಆಫ್ ಯೂ” : ಕುತೂಹಲ ಹೆಚ್ಚಿಸಿದ ಪ್ರಭಾಸ್ ರಾಧೆಶ್ಯಾಮ್ ಟೀಸರ್..!
ಇಂದು ಪ್ರಬಾಸ್ ಅವರ ಬರ್ತ್ ಡೇ ಪ್ರಯುಕ್ತ ರಾಧೆಶ್ಯಾಮ್ ಸಿನಿಮಾತಂಡವು ಅಭಿಮಾನಿಗಳ ಖುಷಿ ಹೆಚ್ಚಿಸಲು ಪ್ರಭಾಸ್ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿದೆ. ಟೀಸರ್ ಎದೆ ಬಡಿತ ಹೆಚ್ಚಿಸುವಂತಿದೆ. ಪ್ರಭಾಸ್ ಕ್ಯಾರೆಕ್ಟರ್ ಕುತೂಹಲ ಹೆಚ್ಚಿಸುತ್ತಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ವೀವ್ಸ್ ಲಕ್ಷ ದಾಟಿದೆ. ಲೈಕ್ಸ್ 100ಸಾವವಿರ ದಾಟಿದೆ. ಸಾವಿರಾರು ಕಮೆಂಟ್ ಗಳು ಬಂದಿವೆ.
“ಐ ನೋ ಯೂ…. ಬಟ್ ನೋ…. ಐ ವೋಂಟ್ ಟೆಲ್ ಯೂ… ಐ ಕ್ಯಾನ್ ಫೀಲ್ ಯುರ್ ಹಾರ್ಟ್ ಬ್ರೇಕ್… ಬಟ್ ಐ ವೋಂಟ್ ಟೆಲ್ ಯೂ…ಐ ಕ್ಯಾನ್ ಸೀ ಯುರ್ ಫೇಲ್ಯೂರ್ಸ್.. ಬಟ್ ಐ ವೋಂಟ್ ಟೆಲ್ ಯೂ.. ಐ ಕ್ಯಾನ್ ಸೆನ್ಸ್ ಯುರ್ ಡೆತ್.. ಬಟ್ ನೋ… ಐ ವೋಂಟ್ ಟೆಲ್ ಯೂ… ಐ ನೋ ಎವರಿ ಥಿಂಗ್.. ಯೆಟ್ ಐ ವೋಂಟ್ ಟೆಲ್ ಯೂ.. ಬಿಕಾಸ್ ಇಟ್ಸ್ ಬಿಯಾಂಡ್ ಯುರ್ ಅಂಡರ್ಸ್ಟಾಂಡಿಂಗ್.. ಮೈ ನೇಮ್ ಈಸ್ ವಿಕ್ರಮಾದಿತ್ಯ… ಐಮ್ ನೋ ಗಾಡ್.. ಬಟ್ ಐಮ್ ನಾಟ್ ಒನ್ ಆಫ್ ಯೂ ಈದರ್.. ಟೀಸರ್ ನಲ್ಲಿ ಬ್ಯಾಕ್ ಗ್ರೌಂಡ್ ನಲ್ಲಿ ಬರೋ ಈ ಲೈನ್ ಗಳು ಸಿನಿಮಾದಲ್ಲಿನ ವಿಕ್ರಮಾದಿತ್ಯನ ಪಾತ್ರದ ಬಗ್ಗೆ ಸಾಕಷ್ಟು ಕೂತೂಹಲಗಳನ್ನ ಹುಟ್ಟುಹಾಕುತ್ತದೆ.
ಪ್ರಭಾಸ್ ಒಂದು ರೀತಿ ಭವಿಷ್ಯ ಹೇಳಬಲ್ಲರು, ಮುಂದೇನಾಗುತ್ತದೆ ಅನ್ನೋದನ್ನ ಮುಂಚೆಯೇ ತಿಳಿದುಕೊಳ್ಳುವ ಶಕ್ತಿ ಇರುವ ಪಾತ್ರವನ್ನ ನಿಭಾಯಿಸುತ್ತಿದ್ದಾರೆ ಅಂತ ಹೇಳಬಹುದು. ದೇವರಲ್ಲ ಆದ್ರೆ ಇತರೇ ಮನುಷ್ಯರಂತೆಯೂ ಅಲ್ಲ ಎಂಬ ಡೈಲಾಗ್ ನಿಂದಲೇ ಪ್ರಭಾಸ್ ಅವರಿಗೆ ಒಂದು ವಿಭಿನ್ನ ಶಕ್ತಿ ಇದೆ ಅನ್ನೋದನ್ನ ನಾವಿಲ್ಲಿ ಅಂದಾಜಿಸಬಹುದು. ಒಟ್ಟಾರೆ ಈ ಟಿಸರ್ ಸಸ್ಪೆನ್ಸ್ , ಥ್ರಿಲ್ಲಿಂಗ್ ನಿಂದ ಕೂಡಿದ್ದು, ಸಿನಿಮಾದ ಮೇಲಿನ ಕ್ಯೂರಿಯಾಸಿಟಿಯನ್ನ ಟೀಸರ್ ಹೆಚ್ಚಿಸಿದೆ.
ಸಿನಿಮಾದಲ್ಲಿ ಪೂಜಾ ಹೆಗಡೆ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ತಾಯಿದ್ದಾರೆ. ಸಿನಿಮಾದಲ್ಲಿ ಪ್ರಭಾಸ್ ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಯುವಿ ಕ್ರಿಯೇಷನ್ಸ್ ಬ್ಯಾನರ್ ನ ಅಡಿ ಮೂಡಿಬಂದಿರುವ ಸಿನಿಮಾಗೆ ರಾಧಾಕೃಷ್ಣಕುಮಾರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ.