ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟಿದ್ದೀರಾ… ಹ್ಯಾಪಿ ಬರ್ತ್ ಡೇ ಸಚಿನ್
ಸಚಿನ್ ತೆಂಡುಲ್ಕರ್ ಅವರ 48ನೇ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಶುಭ ಹಾರೈಸಿಸಿದ್ದಾರೆ.
1973, ಏಪ್ರಿಲ್ 24ರಂದು ಮುಂಬೈನ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಸಚಿನ್ ತೆಂಡುಲ್ಕರ್ ಸಾಹಿತಿ ರಮೇಶ್ ತೆಂಡುಲ್ಕರ್ ಅವರ ಮಗ. ಸಾಹಿತಿಯ ಮಗ ಕ್ರಿಕೆಟ್ ಆಟಗಾರನಾಗಿ ರೂಪುಗೊಳ್ಳಲು ಕಾರಣ ಅಣ್ಣ ಅಜಿತ್ ತೆಂಡುಲ್ಕರ್.
ತನ್ನ ತಮ್ಮನನ್ನು ಕ್ರಿಕೆಟಿಗನಾಗಿ ರೂಪಿಸಲು ಅಣ್ಣ ಅಜಿತ್ ತೆಂಡುಲ್ಕರ್ ಪಟ್ಟ ಶ್ರಮ ಅಷ್ಟಿಷ್ಟಲ್ಲ. ತರಬೇತುದಾರ ರಮಕಾಂತ್ ಅರ್ಚೆಕರ್ ಗರಡಿಯಲ್ಲಿ ಪಳಗಿದ್ದ ಸಚಿನ್ ತೆಂಡುಲ್ಕರ್ 1989ರಲ್ಲಿ ಭಾರತ ತಂಡವನ್ನು ಪ್ರವೇಶ ಮಾಡುತ್ತಾರೆ. ಅಲ್ಲಿಂದ ಸುಮಾರು ಅಂದ್ರೆ 2013ರವರೆಗೆ ನಡೆದಿದ್ದು ಸಚಿನ್ ಪರ್ವ.
ಭಾರತ ಕ್ರಿಕೆಟ್ ತಂಡಕ್ಕೆ ಕಿರಿಯ ಆಟಗಾರನಾಗಿ ಪ್ರವೇಶ ಪಡೆದು 2013ರಲ್ಲಿ ನಿವೃತ್ತಿಯಾದಾಗ ಸಚಿನ್ ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಹಿರಿಯಣ್ಣ. ಅಭಿಮಾನಿಗಳ ಪಾಲಿಗೆ ಕ್ರಿಕೆಟ್ ದೇವ್ರು. ವಿಶ್ವ ಕ್ರಿಕೆಟ್ ನ ಮಾಸ್ಟರ್ ಬ್ಲ್ಯಾಸ್ಟರ್. ಕ್ರಿಕೆಟ್ ಆಟಕ್ಕೆ ಗುರು. ಅಷ್ಟೇ ಅಲ್ಲ, ದಾಖಲೆಗಳ ಒಡೆಯ. ನೂರು ಶತಕ ಹಾಗೂ 34 ಸಾವಿರಕ್ಕೂ ಅಧಿಕ ರನ್ ದಾಖಲಿಸಿರುವ ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನ ಎವರ್ ಗ್ರೀನ್ ಹೀರೋ.
ಇದೀಗ 48ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡುಲ್ಕರ್ ಗೆ ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ಹೇಳಿದ್ದಾರೆ.
90ರ ದಶಕದಲ್ಲಿ ಮನೆ ಮನೆಯಲ್ಲೂ ಸಚಿನ್ ಹೆಸರು ರಾರಾಜಿಸುತ್ತಿತ್ತು. ಕ್ರಿಕೆಟ್ ಮೈದಾನದಲ್ಲಿ ಸಚಿನ್ ಸಚಿನ್ ಸಚಿನ್ ಅನ್ನೋ ಮೂರಕ್ಷರ ಧ್ವನಿ ಮೊಳಗುತ್ತಿತ್ತು. ಜಾಹಿರಾತು ಕಂಪೆನಿಗಳ ರಾಯಭಾರಿಯಾಗಿರುವ ಸಚಿನ್ ತೆಂಡುಲ್ಕರ್ ಭಾರತೀಯ ಕ್ರಿಕೆಟ್ ಗೆ ದುಡ್ಡಿನ ಮುಖವನ್ನು ತೋರಿಸಿದ್ದ ಕ್ರಿಕೆಟಿಗ.
ತನ್ನ ಅದ್ಭುತ ಪ್ರತಿಭೆ, ಕ್ಲಾಸ್ ಮತ್ತು ಮಾಸ್ ಆಟದ ಮೂಲಕವೇ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದ ಸಚಿನ್ ಅವರನ್ನು ಕೆಲವರು ಸ್ವಾರ್ಥಿ ಅಂತ ಕರೆದ್ರು. ಆದ್ರೂ ತಲೆಕೆಡಿಸಿಕೊಳ್ಳದ ಸಚಿನ್ ತನಗೆ ಇಷ್ಟ ಬಂದಷ್ಟು ದಿನ ಕ್ರಿಕೆಟ್ ಆಡುತ್ತ 2013ರಲ್ಲಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು.
ಕ್ರಿಕೆಟ್ ನಿವೃತ್ತಿಯ ನಂತರವೂ ಸಚಿನ್ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಮಾತ್ರ ಬಿಟ್ಟುಕೊಡಲಿಲ್ಲ. ಈಗಲೂ ಕ್ರಿಕೆಟ್ ಆಟದ ಜೊತೆಗೆ ನಂಟು ಹೊಂದಿದ್ದಾರೆ. ಇತ್ತಿಚೆಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ವಿಶ್ರಾಂತಿಯಲ್ಲಿದ್ದಾರೆ.
Happy birthday sachin – You gave us a lifetime of memories
ಒಂದು ಕಾಲದಲ್ಲಿ ಭಾರತ ತಂಡ ಆಡುತ್ತಿದ್ರೆ ಕ್ರಿಕೆಟ್ ಪ್ರೇಮಿಗಳು ಕೇಳುತ್ತಿದ್ದದ್ದು ಎರಡು ಪ್ರಶ್ನೆಗಳನ್ನು ಮಾತ್ರ. ಸಚಿನ್ ಸ್ಕೋರು ಎಷ್ಟು.. ಭಾರತ ತಂಡದ ರನ್ ಎಷ್ಟು.. ಅಷ್ಟೇ. ಯಾಕಂದ್ರೆ 90ರ ದಶಕದಲ್ಲಿ ಭಾರತ ಕ್ರಿಕೆಟ್ ತಂಡ ಸಚಿನ್ ತೆಂಡುಲ್ಕರ್ ಅವರನ್ನು ಅಷ್ಟೊಂದು ಅವಲಂಬಿತವಾಗಿತ್ತು.
2000ನಂತರ ಟೀಮ್ ಇಂಡಿಯಾದಲ್ಲಿ ಯುವ ಕ್ರಿಕೆಟಿಗರ ಎಂಟ್ರಿಯಾದ್ರೂ ಕೂಡ ಸಚಿನ್ ತನ್ನ ಬ್ಯಾಟಿಂಗ್ ಮೊನಚು ಸ್ವಲ್ಪನೂ ಕಮ್ಮಿಯಾಗಲಿಲ್ಲ. ಸಚಿನ್ ಬ್ಯಾಟಿಂಗ್ ಮುಂದೆ ಯುವ ಕ್ರಿಕೆಟಿಗರು ಕೂಡ ಸೈಲೆಂಟ್ ಆಗಬೇಕಾಯ್ತು. ಐದು ಬಾರಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗದೇ ಇದ್ದಾಗ ಆರನೇ ಬಾರಿ ಧೋನಿ ಹುಡುಗರು ತನ್ನ ನೆಚ್ಚಿನ ಆಟಗಾರನ ಆಸೆಯನ್ನು ಈಡೇರಿಸಿದ್ದಲ್ಲದೇ ತನ್ನ ಕ್ರಿಕೆಟ್ ಬದುಕನ್ನು ಅರ್ಥಪೂರ್ಣಗೊಳಿಸಿದ್ರು.
ತನ್ನ 40ನೇ ವಯಸ್ಸಿನಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದಾಗ 24 ವರ್ಷಗಳ ಸುದೀರ್ಫವಾದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಗೆ ಕಣ್ಣೀರಿನ ವಿದಾಯ ಹೇಳಿದ್ರು.
ನಿವೃತ್ತಿಯಾಗಿ ಎಂಟು ವರ್ಷ ಕಳೆದ್ರೂ ಸಚಿನ್ ಮೈದಾನಕ್ಕೆ ಎಂಟ್ರಿಯಾದ ಅಭಿಮಾನಿಗಳು ಸಚಿನ್ ಹೆಸರನ್ನು ಮಂತ್ರದಂತೆ ಪಠಿಸುತ್ತಾರೆ. ಕಾರಣ ಸಚಿನ್ ತೆಂಡುಲ್ಕರ್ ಮೈದಾನದಲ್ಲಿ ಮಾಡಿದ್ದ ಮೋಡಿಯೇ ಅಂತಹುದ್ದು.
ಅದು ಏನೇ ಇರಲಿ, ಸಚಿನ್ ಕ್ರಿಕೆಟ್ ಆಡಿದ್ದು, ಮಾಡಿರುವ ಸಾಧನೆ ಎಲ್ಲವೂ ಇತಿಹಾಸ. ಈಗೀನ ಜನರೇಷನ್ ಗೆ ಅದೊಂದು ಕ್ರಿಕೆಟ್ ಇತಿಹಾಸದ ಪುಸ್ತಕ.
ಒಟ್ಟಿನಲ್ಲಿ ಸಚಿನ್ ತೆಂಡುಲ್ಕರ್ ಹೆಸರು ಕೇಳುವಾಗ ನೆನಾಪಗೋದು ಎಂದೆಂದೂ ಮರೆಯದ ಅವಿಸ್ಮರಣೀಯ ಪಂದ್ಯಗಳು. ಹ್ಯಾಪಿ ಬರ್ತ್ ಡೇ ಸಚಿನ್..








