ಹ್ಯಾಪಿ ಬರ್ತ್ ಡೇ ಯೂನಿವರ್ಸಲ್ ಬಾಸ್ Chris Gayle
ವಿಶ್ವಕ್ರಿಕೆಟ್ ನ ಯೂನಿವರ್ಸಲ್ ಬಾಸ್ ಅಂತಲೇ ಖ್ಯಾತಿ ಪಡೆದುಕೊಂಡಿರುವ ಕೆರಿಬಿಯನ್ ದೈತ್ಯ ಬ್ಯಾಟ್ಸ್ ಮೆನ್ ಕ್ರಿಸ್ ಗೇಲ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.
ಕ್ರಿಸ್ಟೋಪರ್ ಹೆನ್ರಿ ಗೇಲ್ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದಲೇ ಎದುರಾಳಿ ಬೌಲರ್ ಗಳ ಎದೆಯಲ್ಲಿ ನಡುಕು ಹುಟ್ಟಿಸುವ ಗೇಲ್ ಹಲವು ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ತ್ರಿಶತಕ ಸಿಡಿಸಿರುವ ಹಾಲಿ ಕ್ರಿಕೆಟಿಗ, ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್.. ಹಾಗೇ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್, ಟೆಸ್ಟ್ ಕ್ರಿಕೆಟ್ ನಲ್ಲಿ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿ ಮೊದಲ ಆರಂಭಿಕ ಬ್ಯಾಟ್ಸ್ ಮನ್, ಟಿ-20 ಕ್ರಿಕೆಟ್ ನಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮೆನ್ ಹೀಗೆ ಹತ್ತು ಹಲವು ದಾಖಲೆಗಳು ಗೇಲ್ ಹೆಸರಿನಲ್ಲಿವೆ.
ಪ್ರತಿ ಕ್ಷಣ ಜಾಲಿ ಮೂಡ್ ನಲ್ಲಿ ಕಾಣಿಸುವ ಕ್ರಿಸ್ ಗೇಲ್ ಗೆ ಭಾರತದಲ್ಲಿ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ. ಐಪಿಎಲ್ ನಲ್ಲಿ ಈ ಹಿಂದೆ ಆರ್ ಸಿಬಿ ಪರ ಬ್ಯಾಟ್ ಬೀಸಿದ್ದ ಗೇಲ್ ರೆಡ್ ಬ್ರಿಗೇಡ್ ನ ಅವಿಭಾಜ್ಯ ಅಂಗವಾಗಿದ್ದರು. ಒಂಟಿ ಸಲಗದಂತೆ ಹೋರಾಡಿ ಅದೆಷ್ಟೋ ಪಂದ್ಯಗಳನ್ನು ಆರ್ ಸಿಬಿಗೆ ಗೆದ್ದುಕೊಟ್ಟಿದ್ದಾರೆ. ಐಪಿಎಲ್ ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರ ಎನ್ನುವ ದಾಖಲೆ ಕೂಡಾ ಗೇಲ್ ಹೆಸರಿನಲ್ಲಿದೆ.
ಈ ಹಿಂದೆ ಆರ್ ಸಿಬಿ ಅಭಿಮಾನಿಗಳ ಮನಗೆದ್ದಿದ್ದ ಗೇಲ್ ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೂಡಿಕೊಂಡಿದ್ದಾರೆ.