Har Ghar Tiranga | ಮನೆ ಮನೆಯಲ್ಲೂ ತ್ರಿವರ್ಣ
ಹರ್ ಘರ್ ತಿರಂಗಾ ಅಭಿಯಾನ ಶುರು
ಮನೆ ಮನೆಯಲ್ಲೂ ತಿರಂಗಾ ಹಾರಾಟ
ದೇಶದ ಎಲ್ಲೆಡೆ ರಾಷ್ಟ್ರಪ್ರೇಮದ ಕೂಗು
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ
ನವದೆಹಲಿ : ಸ್ವಾತಂತ್ರಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ಕೊಟ್ಟಿದ್ದಾರೆ.
ಅದರಂತೆ ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದೆ.
ಇಂದು ಬೆಳಿಗ್ಗೆ ದೇಶದ ಹಲವು ಕಡೆಗಳಲ್ಲಿ ಜನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶಪ್ರೇಮದ ಕಹಳೆ ಮೊಳಗಿಸಿದ್ದಾರೆ.
![har-ghar-tiranga karnataka saaksha tv](http://saakshatv.com/wp-content/uploads/2022/08/tumkur.jpg)
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಕೇವಲ ನಾಯಕರುಗಳು ಮಾತ್ರವಲ್ಲದೇ ದೇಶದ ಜನರು ಕೂಡ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ತಮ್ಮ ತಮ್ಮ ಮನೆಗಳಲ್ಲಿ ತಿರಂಗಾವನ್ನು ಹಾರಿಸುತ್ತಿದ್ದಾರೆ.