ದೆಹಲಿ- ಆಮ್ ಆದ್ಮಿ ಪಕ್ಷದ ಶಾಸಕನ ಕಿರುಕುಳದಿಂದ ಬೇಸತ್ತು ೫೨ ವರ್ಷದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಡೆತ್ ನೋಟ್ ಬರೆದಿರುವ ಮೃತ ವೈದ್ಯ, ‘ಆಡಳಿತ ಪಕ್ಷದ ಶಾಸಕ ಮತ್ತು ಸಹಚರರು ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಣ ನೀಡಲು ನಿರಾಕರಿಸಿದಾಗ ನನ್ನ ವ್ಯವಹಾರಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದೆಲ್ಲಾ ಆರೋಪ ಮಾಡಿದ್ದಾರೆ. ದೆಹಲಿ ನೆಬ್ ಸರಾಯ್ ಪ್ರದೇಶದ ನಿವಾಸಿಯಾಗಿದ್ದ ರಾಜೇಂದ್ರ ಸಿಂಗ್ ಮೃತ ವೈದ್ಯ. ಅವರು ನೀರಿನ ಟ್ಯಾಂಕರ್ ವ್ಯವಹಾರವನ್ನೂ ನಡೆಸುತ್ತಿದ್ದರು. ಭಾನುವಾರ ಬೆಳಗ್ಗೆ ಅವರು ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ತಮ್ಮ ಸಾವಿಗೆ ದೇವ್ಲಿ ಶಾಸಕ ಪ್ರಕಾಶ್ ಜಾರ್ವಾಲ್ ಮತ್ತು ಅವರ ಸಹಚರ ಕಪಿಲ್ ನಗರ್ ಕಾರಣ ಎಂದು ವೈದ್ಯ ರಾಜೇಂದ್ರ ಸಿಂಗ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ದೆಹಲಿ ಪೊಲೀಸರು ಮೃತ ವೈದ್ಯ ರಾಜೇಂದ್ರ ಸಿಂಗ್ ಅವರ ಡೈರಿಯನ್ನು ವಶಕ್ಕೆ ಪಡೆದಿದ್ದಾರೆ. ಶಾಸಕ ಪ್ರಕಾಶ್ ಜಾರ್ವಾಲ್ ಅವರ ಕಿರುಕುಳವನ್ನು ವೈದ್ಯ ಅದರಲ್ಲಿ ವಿವರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದೆಹಲಿ ಜಲಮಂಡಳಿಗೆ ಟ್ಯಾಂಕರ್‌ಗಳನ್ನು ತಾವು ಬಾಡಿಗೆ ನೀಡಿರುವುದಾಗಿಯೂ, ಅದಕ್ಕೆ ಪ್ರತಿಯಾಗಿ ಶಾಸಕ ಜಾರ್ವಾಲ್ ಅವರು ಹಣ ಕೇಳುತ್ತಿರುವುದಾಗಿಯೂ, ಹಣ ನೀಡದೇ ಇದ್ದಾಗ ಟ್ಯಾಂಕರ್‌ಗಳನ್ನು ಜಲ ಮಂಡಳಿಯಿಂದ ತೆಗೆದುಹಾಕಿರುವುದಾಗಿಯೂ, ಅಲ್ಲದೆ ತನಗೆ ಕೊಲೆ ಬೆದರಿಕೆ ಇದ್ದದ್ದಾಗಿಯೂ ವೈದ್ಯ ಡೈರಿಯಲ್ಲಿ ಬರೆದಿದ್ದಾರೆ. ಶಾಸಕ ಜಾರ್ವಾಲ್ ಮತ್ತು ಸಹಚರರ ವಿರುದ್ಧ ಸುಲಿಗೆ, ಕೊಲೆ ಯತ್ನ ಮತ್ತು ಬೆದರಿಕೆ ಪ್ರಕರಣ ದಾಖಲಿಸಲಾಗಿದೆ. ಜಾರ್ವಾಲ್ ಈ ಹಿಂದೆ ಮಹಿಳೆಯನ್ನು ಬೆದರಿಸಿದ ಆರೋಪ ಎದುರಿಸಿದ್ದರು. ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೀಪಾರಾಧನೆಯ ರಹಸ್ಯ: ಯಾವ ಎಣ್ಣೆ, ಎಷ್ಟು ಬತ್ತಿ ಹಚ್ಚಿದರೆ ಏನು ಫಲ?
1"ಇಪ್ಪೆ ಎಣ್ಣೆ"ಯು ದೇವರಿಗೆ ತುಂಬಾ ತುಂಬಾ ಶ್ರೇಷ್ಠ.. ಇದರಿಂದ ಮನೆಯಲ್ಲಿ ದುಃಖ, ದಾರಿದ್ರ್ಯ, ಬಡತನ, ಧನದರಿದ್ರ , ಅನ್ನದರಿದ್ರ, ನಿತ್ಯದರಿದ್ರ, ಹಾಗೂ ಸಾಲದ ಭಾದೆ ನಿವಾರಣೆಯಾಗುತ್ತದೆ .....








