Harbhajan Singh | ಹುಟ್ಟುಹಬ್ಬದ ಸಂಭ್ರಮದಲ್ಲಿ ಹರ್ಭಜನ್ ಸಿಂಗ್..!
ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು 42 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಭಜ್ಜಿ ಎಂದೇ ಖ್ಯಾತಿ ಪಡೆದಿದ್ದ ಹರ್ಭಜನ್ ಸಿಂಗ್ ಅವರ ಹುಟ್ಟುಹಬ್ಬಕ್ಕೆ ಭಾರತ ಕ್ರಿಕೆಟ್ ಜಗತ್ತಿನ ಹಲವು ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಸಿದ್ದಾರೆ.
1998ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಹರ್ಭಜನ್ ಸಿಂಗ್, 2011ರವರೆಗೂ ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯರಾಗಿದ್ದರು.

2007ರ ಐಸಿಸಿ ಟಿ 20 ವಿಶ್ವಕಪ್ ಹಾಗೂ 2011 ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಭಜ್ಜಿ ಕಾಣಿಸಿಕೊಂಡಿದ್ದರು.
ಆದ್ರೆ 2011ರ ಬಳಿಕ ಬ್ಯಾಡ್ ಫಾರ್ಮ್ ಗೆ ಸಿಲುಕಿದ ಭಜ್ಜಿ ತಂಡದಿಂದ ದೂರವಾಗಿ ಇತ್ತೀಚೆಗಷ್ಟೆ ವಿದಾಯ ಘೋಷಿಸಿದ್ದಾರೆ.
ಭಾರತದ ಪರ 103 ಟೆಸ್ಟ್ ಪಂದ್ಯಗಳಾಡಿರುವ ಹರಭಜನ್ ಸಿಂಗ್, 417 ವಿಕೆಟ್‌ಗಳನ್ನು ಪಡೆದಿದ್ದಾರೆ. 236 ಏಕದಿನ ಪಂದ್ಯಗಳಿಂದ 269 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
ನಾಲ್ಕು ಬಾರಿ ಐಪಿಎಲ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರೂ ಆಗಿರುವ ಭಜ್ಜಿ, 2011ರಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು.