ವಿರಾಟ್ ಕೊಹ್ಲಿಗೆ ಸೀರಿಯಸ್ ವಾರ್ನಿಂಗ್ ಕೊಟ್ಟ ಹರ್ಭಜನ್
ಕಳೆದ ಎರಡು ವರ್ಷಗಳಿಂದ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಇಷ್ಟು ದಿನ ನಾಯಕತ್ವದಲ್ಲಿದ್ದ ಕಾರಣ ನಡೀತು. ಇನ್ಮುಂದೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮಿಂಚದಿದ್ದರೆ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಟೀಂ ಇಂಡಿಯಾದಲ್ಲಿ ತೀವ್ರ ಪೈಪೋಟಿ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿ ಬ್ಯಾಟ್ ಬೀಸಬೇಕು ಎಂದು ವಿರಾಟ್ ಗೆ ಭಜ್ಜಿ ಸಲಹೆ ನೀಡಿದ್ದಾರೆ.
ಇನ್ನೇನು ಶೀಘ್ರದಲ್ಲೇ ಐಪಿಎಲ್ 2022 ಪ್ರಾರಂಭವಾಗಲಿದ್ದು, ಯುವ ಆಟಗಾರರ ಪ್ರತಿಭೆ ಅನಾವರಣಗೊಳ್ಳಲಿದೆ. ಇದರಿಂದ ಕೊಹ್ಲಿ ಸ್ಥಾನಕ್ಕೆ ಅಪಾಯವಿದೆ.
ಘನ ಇತಿಹಾಸ ಹೊಂದಿರುವ ಯಾವುದೇ ಆಟಗಾರನಿಗೆ ಉತ್ತಮ ಪ್ರದರ್ಶನ ಅತ್ಯಗತ್ಯವಾಗಿರುತ್ತದೆ. ಒಂದು ವೇಳೆ ಪಾರ್ಮ್ ನಲ್ಲಿಲ್ಲದೇ ಹೋದಲ್ಲಿ ಎಂತಹ ಆಟಗಾರನಾದ್ರೂ ತಂಡದಿಂದ ದೂರ ಉಳಿಯಬೇಕಾಗುತ್ತದೆ ಎಂದು ಹರ್ಜಜನ್ ಹೇಳಿದ್ದಾರೆ.
ಐದು ತಿಂಗಳ ಹಿಂದಿನವರೆಗೂ ಕೊಹ್ಲಿ ಎಲ್ಲಾ ಫಾರ್ಮೆಟ್ಗಳಲ್ಲಿ ತಂಡದ ನಾಯಕರಾಗಿದ್ದರು ಮತ್ತು ತಂಡದ ಆಯ್ಕೆಯಲ್ಲಿ ನಾಯಕನಿಗೆ ಮೊದಲ ಆದ್ಯತೆಯಾಗಿರುವುದರಿಂದ ಅವರು ಫಾರ್ಮ್ ಅನ್ನು ಲೆಕ್ಕಿಸದೆ ಅಂತಿಮ ತಂಡದಲ್ಲಿದ್ದರು.
ಆದ್ರೆ ಈಗ ಅದು ಹಾಗಲ್ಲ ಎಂಬುದನ್ನು ವಿರಾಟ್ ಅರಿತುಕೊಳ್ಳಬೇಕು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕೊಹ್ಲಿ ಮೇಲೆ ಒತ್ತಡ ಇರುವುದು ಸಹಜ, ಆದರೆ ಇಂತಹ ಪರಿಸ್ಥಿತಿಗಳನ್ನು ಮೆಟ್ಟಿ ನಿಲ್ಲುವುದು ವಿರಾಟ್ ಗೆ ಹೊಸದಲ್ಲ ಎಂದು ಹರ್ಭಜನ್ ಹೇಳಿದ್ದಾರೆ.