ಧೋನಿ ನನ್ನ ಹೆಂಡ್ತಿ ಅಲ್ಲ
ಎಂಎಸ್ ಡಿ ಬಗ್ಗೆ ಭಜ್ಜಿ ಮಾತು
ಧೋನಿ ಬಗ್ಗೆ ಭಜ್ಜಿ ಬೇಸರ
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ, ಬಿಸಿಸಿಐ ಮೇಲೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಕೆಗಳ ಸುರಿಮಳೆಗೈದಿದ್ದಾರೆ. harbhajan-singh- MS Dhoni Is Not My Wife saaksha tv
2011ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ಧೋನಿ ಹಿರಿಯರನ್ನು ಪರಿಗಣಿಸದೇ ನಿರ್ದಾಕ್ಷಿಣ್ಯವಾಗಿ ನಡೆದುಕೊಂಡಿದ್ದಾರೆ.
ಸರಿಯಾದ ವಿವರಣೆ ನೀಡದೇ ತಂಡದಿಂದ ಹೊರಹಾಕಿದ್ರು ಎಂದು ಆರೋಪಿಸಿದ್ದಾರೆ. ಧೋನಿ ವ್ಯವಹರಿಸಿದ ರೀತಿಯ ಕಾರಣದಿಂದಲೇ ನಾನು, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಸೇರಿದಂತೆ ಹಲವರು ತಂಡದಲ್ಲಿ ಸ್ಥಾನ ಪಡೆಯಲು ಪರದಾಡಬೇಕಾಗಿತ್ತು ಎಂದು ಹರ್ಭಜನ್ ಬೇಸರ ಹೊರಹಾಕಿದ್ದಾರೆ.
ಅಲ್ಲದೇ ಧೋನಿ ಈ ಹೀಗೆ ನಡೆದುಕೊಳ್ಳುವುದರ ಹಿಂದೆ ಆಗ ಬಿಸಿಸಿಐನಲ್ಲಿದ್ದ ಕೆಲವರು ಅವರಿಗೆ ಸಹಕರಿಸಿದ್ದಾರೆ. ನನ್ನಂತವನಿಗೆ ಭಾರತ ಕ್ರಿಕೆಟ್ ಬೋರ್ಡ್ ನಲ್ಲಿ ಗಾಡ್ ಫಾದರ್ ಯಾರು ಇಲ್ಲದಿರುವುದೇ ನನ್ನ ಕೆರಿಯರ್ ನಲ್ಲಿ ಸಮಸ್ಯೆಗಳನ್ನು ಎದುರಿಸಲು ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಧೋನಿಯನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಮುಂದುವರೆಸಿದ ಭಜ್ಜಿ, ಮಾಜಿ ನಾಯಕನಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಹಾಗಾಗಲು ಅವರು ನನ್ನ ಪತ್ನಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಧೋನಿ ಕ್ಯಾಪ್ಟನ್ಸಿನಲ್ಲಿ ಉನ್ನತ ಶಿಖರಗಳನ್ನು ಸೇರುವಷ್ಟರಲ್ಲಿ ನಾನು ಟೆಸ್ಟ್ ನಲ್ಲಿ 400 ಕ್ಕೂ ಹೆಚ್ಚು ವಿಕೆಟ್ ಗಳನ್ನು ಸಾಧಿಸಿದ್ದೆ.
ಹೀಗಿದ್ದರೂ ಯಾವುದೇ ವಿವರಣೆ ನೀಡದೇ ನನ್ನನ್ನ ತಂಡದಿಂದ ಕೈಬಿಡಲಾಯಿತು . ನನಗೆ ಆಗಿನ ಬಿಸಿಸಿಐ ಅಧಿಕಾರಿಗಳ ಬೆಂಬಲ ಇದ್ದಿದ್ದರೇ 600 ಟೆಸ್ಟ್ ವಿಕೆಟ್ಗಳನ್ನು ಕಬಳಿಸಿ ನಿವೃತ್ತಿಯಾಗುತ್ತಿದ್ದೆ ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.
ಅಂದಿನ ಆಯ್ಕೆಗಾರರು ತಂಡವನ್ನು ಒಟ್ಟಿಗೆ ಆಡಲು ಬಿಡಲಿಲ್ಲ, ಆದರೆ ಹಿರಿಯರು ಅದ್ಭುತವಾಗಿ ಆಡುತ್ತಿದ್ದರೂ ವಿಶ್ರಾಂತಿ ಹೆಸರಿನಲ್ಲಿ ಅವರನ್ನ ತಂಡದಿಂದ ಕೈಬಿಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಈ ಕಮೆಂಟ್ ಗಳನ್ನು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ವೇಳೆಯಲ್ಲಿ ಹರ್ಭಜನ್ ಸಿಂಗ್ ಈ ಕಮೆಂಟ್ ಗಳನ್ನು ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.
ಕಳೆದ ವರ್ಷ ಡಿಸೆಂಬರ್ 24 ರಂದು ಟರ್ಬನೇಟರ್ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು.