ನಹದೆಹಲಿ: ಒಂದು ಪಂದ್ಯ ಗೆಲ್ಲಬೇಕೆಂದರೆ ತಂಡದಲ್ಲಿರುವ ಎಲ್ಲರ ಪರಿಶ್ರಮ ಬೇಕೇ ಬೇಕು. ಅದೇ ರೀತಿ ಭಾರತದ ಕ್ರಿಕೆಟ್‌ಗೆ ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಗೆಲವಿಗೆ ಸ್ಪಿನ್ನರ್ ಅನಿಲ್‌ಕುಂಬ್ಳೆ ಮೋಡಿಯನ್ನು ಯಾರೂ ಮರೆಯುವಂತೆಯೇ ಇಲ್ಲ.
ಭಾರತ ಪರ ಆಡಿದ ಶ್ರೇಷ್ಠ ಕ್ರಿಕೆಟಿಗರ ಪಟ್ಟಿ ಮಾಡಿರುವ ಆಲ್‌ರೌಂಡರ್ ಹರ್ಭಜನ್ ಸಿಂಗ್, ಆ ಸ್ಥಾನವನ್ನು ಅನಿಲ್ ಕುಂಬ್ಳೆಗೆ ನೀಡಿದ್ದಾರೆ.
ಭಾರತದ ಶ್ರೇಷ್ಠ ಕ್ರಿಕೆಟಿಗರ ಪೈಕಿ ಕಪಿಲ್‌ದೇವ್ ನಂತರದ ಸ್ಥಾನವನ್ನು ನಾನು ಅನಿಲ್ ಕುಂಬ್ಳೆಗೆ ನೀಡುತ್ತೇನೆ ಎಂದು ಹರ್ಭಜನ್‌ಸಿಂಗ್ ಹೇಳಿಕೊಂಡಿದ್ದಾರೆ.
ಕ್ರಿಕೆಟ್‌ನಲ್ಲಿ ಬ್ಯಾಟ್ಸ್ಮನ್‌ಗಳೇ ಪ್ರಾಬಲ್ಯ ಹೊಂದಿರುತ್ತಾರೆ. ಆದರೆ, ಈ ಮಾತನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ನೋಡಿದಾಗ ಬೌಲರ್ ಆಗಿ ಅನಿಲ್ ಕುಂಬ್ಳೆ ತಂಡದ ಗೆಲುವಿನ ಲಯವನ್ನೇ ಬದಲಾಯಿಸುತ್ತಿದ್ದರು. ಒಂದು ಟೆಸ್ಟ್ನಲ್ಲಿ ಗೆಲ್ಲಬೇಕೆಂದರೆ ಬೌಲರ್‌ಗಳು ಕನಿಷ್ಠ ೨೦ ವಿಕೆಟ್ ಪಡೆಯಬೇಕು. ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ ಸರ್ಕಾರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್‌ರಂತ ಘಟನಾನುಘಟಿಗಳ ಪೈಕಿ ಅನಿಲ್‌ಕುಂಬ್ಳೆ ಮಾತ್ರ ಗ್ರೇಟೆಸ್ಟ್ ಮ್ಯಾಚ್ ವಿನ್ನರ್ ಎಂದು ಸಿಂಗ್ ಹಾಡಿಹೊಗಳಿದ್ದಾರೆ.
ಯಡಿಯೂರಪ್ಪ ನನಗೆ ಹಿರಿಯಣ್ಣನಿದ್ದಂತೆ: ಈಶ್ವರಪ್ಪ ಸ್ಪಷ್ಟನೆ, ರಾಜಕೀಯ ಜರ್ನಿಗೆ ಹೊಸ ತಿರುವು?
ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ತಮ್ಮ ಮಾತುಗಳಿಂದ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ನನಗೆ ಹಿರಿಯಣ್ಣನಂತೆ. ಅವರಿಗೂ...